ಹೈ ಹೀಲ್ಸ್ ಅಥವಾ ಪೆನ್ಸಿಲ್ ಹೀಲ್ಸ್ ಧರಿಸಿದರೆ ನೋಡಲು ಚೆಂದವಾಗಿ ಕಾಣುತ್ತೇವೆ ಎಂದು ಮಹಿಳೆಯರು, ಹುಡುಗಿಯರು ತುಂಬಾ ಎತ್ತರದ ಪಾದರಕ್ಷೆ ತೊಡುವುದು ರೂಢಿ. ಆದರೆ ಅಂದವಾಗಿ ಕಾಣಲು ಹೋಗಿ ಆರೋಗ್ಯ ಎಡವಟ್ಟು ಮಾಡಿಕೊಂಡರೆ ಕಷ್ಟ. ಹೈ ಹೀಲ್ಸ್ ಧರಿಸಿದರೆ ಕೆಲವೊಂದು ಗಂಭೀರ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.
ಹೈ ಹೀಲ್ ಅಥವಾ ಪೆನ್ಸಿಲ್ ಹೀಲ್ ಧರಿಸುವುದರಿಂದ ಆಗುವ ತೊಂದರೆ:
1. ನಡೆಯುವುದು ಕಷ್ಟ: ಹೈ ಹೀಲ್ಸ್ ಧರಿಸುವುದರಿಂದ ನಡೆಯುವುದು ಕಷ್ಟ. ಹೈ ಹೀಲ್ಸ್ ನೊಂದಿಗೆ ದೇಹವನ್ನು ಬ್ಯಾಲೆನ್ಸ್ ಮಾಡಿ ನಡೆಯುವುದು ಸುಲಭವಲ್ಲ. ಸಮತೋಲನ ತಪ್ಪಿದರೆ ಬೀಳುವುದು ಗ್ಯಾರಂಟಿ. ಇದು ನಿರಂತರವಾದರೆ ವಯಸ್ಸಾಗುವ ಮುನ್ನವೇ ಕೀಲು ನೋವಿನಿಂದ ಬಳಲಬೇಕಾದ ಪರಿಸ್ಥಿತಿ ಬರುತ್ತದೆ.
2. ಉಳುಕಿನ ತೊಂದರೆ: ನೀವು ಹೈ ಹೀಲ್ಸ್ ತೊಡಲು ಆರಂಭಿಸಿದ್ದೀರ ಎಂದರೆ ಖಂಡಿತ ಒಂದಲ್ಲಾ ಒಂದು ಬಾರಿ ಉಳುಕು ಸಂಭವಿಸಿಯೇ ಇರುತ್ತೆ. ಆದ್ದರಿಂದ ಹೈ ಹೀಲ್ಸ್ ತೊಡಲೇ ಬೇಕೆಂದಿದ್ದರೆ ಚೆನ್ನಾಗಿ ಅಭ್ಯಾಸ ಮಾಡಿದ ನಂತರವಷ್ಟೇ ತೊಟ್ಟುಕೊಳ್ಳಿ ಮತ್ತು ಗುಂಡಿ ಹಳ್ಳವಿರುವ ರಸ್ತೆಯಲ್ಲಿ ನಡೆಯಬೇಕಾದ ಪರಿಸ್ಥಿತಿ ಬಂದರೆ ಹೈ ಹೀಲ್ಸ್ ಬದಲಾಗಿ ಬೇರೆ ರೀತಿಯ ಪಾದರಕ್ಷೆಗಳನ್ನು ಧರಿಸಬಹುದು.
3. ಹಿಮ್ಮಡಿ ನೋವು: ಹೈ ಹೀಲ್ಸ್ ಧರಿಸಿದರೆ ಇಡೀ ದೇಹದ ಭಾರ ಹಿಮ್ಮಡಿ ಮೇಲಷ್ಟೆ ಬೀಳುತ್ತದೆ. ಹೆಚ್ಚು ಕಾಲ ಧರಿಸಿದರೆ ಹಿಮ್ಮಡಿ ನೋವು ಬರುವುದು ಖಚಿತ. ಇದು ತಕ್ಷಣವೇ ಕಾಣಿಸಿಕೊಳ್ಳದಿದ್ದರೂ ನಂತರ ನೋವಾಗಿ ಕಾಡಲು ಶುರುವಾಗುತ್ತದೆ.
4. ಬೆನ್ನು ನೋವು: ಹೈ ಹೀಲ್ಸ್ ತೊಟ್ಟರೆ ನಿಮ್ಮ ದೇಹ ಮುಂದಕ್ಕೆ ಬಾಗುವಂತಾಗಿ, ದೇಹದ ಹಿಂಭಾಗಕ್ಕೆ ಹೆಚ್ಚು ಒತ್ತಡ ಹೇರುವಂತಾಗುತ್ತದೆ. ಇದರಿಂದ ಬೆನ್ನು ನೋವು ಆರಂಭವಾಗುತ್ತದೆ. ನೀವು ನಡೆಯುವ ಶೈಲಿ, ವ್ಯಾಯಾಮ ಮತ್ತು ಯೋಗಾಭ್ಯಾಸದಿಂದ ಬೆನ್ನು ನೋವನ್ನು ಕಡಿಮೆಗೊಳಿಸಬಹುದು.
5. ಹಿಮ್ಮಡಿ ಒಡೆಯುವುದು: ಪೆನ್ಸಿಲ್ ಹೀಲ್ಸ್ ಧರಿಸುವುದರಿಂದ ದೇಹದ ಭಾರ ಪಾದಗಳ ಮೇಲೆ ಬಿದ್ದು ಒಡೆಯುತ್ತದೆ. ಮತ್ತು ಹಿಮ್ಮಡಿಯ ಬಣ್ಣ ಹಳದಿಯಾಗಿ ತಿರುಗುತ್ತದೆ. ಆದ್ದರಿಂದ ರಾತ್ರಿ ಹೊತ್ತು ಕಾಲುಗಳಿಗೆ ಲೋಶನ್ ಹಚ್ಚಿದರೆ ಹಿಮ್ಮಡಿಯನ್ನು ಮೃದುವಾಗುವಂತೆ ನೋಡಿಕೊಳ್ಳುತ್ತದೆ.
ಹೈ ಹೀಲ್ಸ್ ನಿಂದ ಉಪಯೋಗ ಮತ್ತು ಅನುಪಯೋಗ ಎರಡೂ ಇದೆ. ಹೈ ಹೀಲ್ಸ್ ಸುಂದರವಾಗಿ ಕಾಣಲು ಧರಿಸಬಹುದು. ಆದರೆ ನಿರಂತರವಾಗಿ ಬಳಸುವುದರಿಂದ ತೊಂದರೆಗೆ ಈಡಾಗುವುದರಲ್ಲಿ ಎರಡು ಮಾತಿಲ್ಲ. ಇದರ ಪರಿಣಾಮ ವಯಸ್ಸಾದ ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ.
» ನಿಮ್ಮ ಚೆಂದ ಹೆಚ್ಚುವುದು ಅಂದದ ಪಾದಗಳಿಂದ
» ಬೆವರಿನಿಂದ ಬಳಲದಿರಲಿ ನಿಮ್ಮ ಚೆಂದದ ಪಾದ
» ಆಹ್ಲಾದಕರ ಟೊಮೆಟೊ ಹಣ್ಣಿನ ಶರಬತ್ತು

Also read
» ಸುಂದರ ದೇಹದ ಆಕಾರಕ್ಕೆ ಹೈ ಹೀಲ್ಡ್ » ನಿಮ್ಮ ಚೆಂದ ಹೆಚ್ಚುವುದು ಅಂದದ ಪಾದಗಳಿಂದ
» ಬೆವರಿನಿಂದ ಬಳಲದಿರಲಿ ನಿಮ್ಮ ಚೆಂದದ ಪಾದ
» ಆಹ್ಲಾದಕರ ಟೊಮೆಟೊ ಹಣ್ಣಿನ ಶರಬತ್ತು