ಅಂದದ ಕೂದಲಿಗೆ ಚೆಂದದ ಸುವಾಸನೆ
Wednesday, October 19, 2011, 10:56 [IST]
Hair
ದಪ್ಪವಾದ, ಕಪ್ಪಾದ, ಆರೋಗ್ಯಕರವಾದ ಕೂದಲಿಗಾಗಿ  ಹೆಚ್ಚಿನ ಪೋಷಣೆ ಮಾಡುತ್ತೇವೆ. ಆದರೆ ಅದೇ ಕೂದಲು ಸುವಾಸನೆಯನ್ನು ಹೊಂದಿದ್ದರೆ ಅದು ಮತ್ತಷ್ಟು ಆಕರ್ಷಣೆಯವಾಗಿರುತ್ತದೆ. ಕೂದಲು ಬೆವರಿನಿಂದಾಗಿ ಗಬ್ಬುನಾತ ಬೀರಿದರೆ ಅದರಿಂದ ಇತರರಿಗಷ್ಟೆ ಅಲ್ಲ ನಿಮಗೂ ಕಿರಿಕಿರಿ ಅನಿಸುವುದು.

ಆದರೆ ಕೂದಲನ್ನು ಸುವಾಸನೆಯನ್ನು ಬೀರುವಂತೆ ಮಾಡುವುದು ಅದೇನು ದೊಡ್ಡ ಕೆಲಸವಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸುವುದರಿಂದ ಕೂದಲು ಸುವಾಸನೆಯನ್ನು ಬೀರುವುದು.

1. ಕೂದಲನ್ನು ತೊಳೆಯುವಾಗ ಬುಡದಿಂದ ಉಜ್ಜಿ ತೊಳೆಯಬೇಕು, ಹೀಗೆ ತೊಳೆದರೆ ಕೊಳೆ, ಜಿಡ್ಡು ಹೋಗುವುದು.

2. ದಪ್ಪ ಕೂದಲಿನವರು ಪ್ರತಿನಿತ್ಯ ಅಥವಾ ಎರಡು ದಿನಕ್ಕೆ ಒಮ್ಮೆಯಾದರೂ ತಲೆ ತೊಳೆಯಬೇಕು.

3. ತಲೆ ತೊಳೆಯುವಾಗ ಮೃದು ಶ್ಯಾಂಪೂ ಮತ್ತು ಸವಾಸನೆಯ ಕಂಡೀಶನರ್ ಬಳಸಿದರೆ ಕೂದಲು ಸುವಾಸನೆಯಿಂದ ಕೂಡಿರುವುದು.

4. ತಲೆಗೆ ಹಚ್ಚುವ ಎಣ್ಣೆಯನ್ನು ಜಾಸ್ಮಿನ್ ಅಥವಾ ರೋಸ್ ಎಣ್ಣೆಯೊಂದಿಗೆ ಬೆರೆಸಿ ರಾತ್ರಿ ಹಚ್ಚಬೇಕು.

5. ಬೆಳಗ್ಗೆ ಹೆಚ್ಚಿನ ವಾಸನೆಯಿಲ್ಲದ ಶ್ಯಾಂಪೂ ಬಳಸಿ ತಲೆತೊಳೆಯಬೇಕು, ಅಧಿಕ ವಾಸನೆಯ ಶ್ಯಾಂಪೂ ಬಳಸಿದರೆ ಎಣ್ಣೆಯ ಸುವಾಸನೆ ತೊಳೆದು ತೆಗೆದು ಬಿಡುತ್ತದೆ. ಆದ್ದರಿಂದ ಜೋನ್ ಸನ್ ಬೇಬಿ ಶ್ಯಾಂಪೂ ಅಂತಹ ಶ್ಯಾಂಪೂ ಬಳಸಿದರೆ ಒಳ್ಳೆಯದು.

6.
ಕೂದಲು ವಿಪರೀತ ಬೆವರುತ್ತದ್ದರೆ ಪ್ರತಿನಿತ್ಯ ತಲೆಗೆ ಎಣ್ಣೆ ಹಚ್ಚಿ ತಣ್ಣೀರಿನಲ್ಲಿ ತಲೆತೊಳೆದರೆ ಕೂದಲು ಕೂಡ ಆರೋಗ್ಯಕರವಾಗಿರುತ್ತದೆ.

8. ಎಣ್ನೆಯಲ್ಲಿ ಅಶ್ವಗಂಧ, ನೆಲ್ಲಿಕಾಯಿ, ಮೆಹಂದಿಯ ಅಂಶವಿರುವ ಎಣ್ಣೆಯಮ್ಮು ತಲೆಗೆ ಹಚ್ಚುವುದು ಸಹ ಒಳ್ಳೆಯದು.

9. ಪರ್ ಫ್ಯೂಮ್ ಅನ್ನು ನೇರವಾಗಿ ತಲೆಗೆ ಹಚ್ಚದೆ ಬಾಚಣೆಗೆ ಮೇಲೆ ಸ್ವಲ್ಪ ಸ್ಪ್ರೇ ಮಾಡಿ ನಂತರ ಕೂದಲು ಒಣಗಿದ ಮೇಲೆ ಬಾಚಿದರೆ ಅದರಿಂದ ಕೂದಲು ಸುವಾಸನೆಯನ್ನು ನೀಡುವುದು.

ಇವುಗಳು ಕೂದಲಿಗೆ ಸುವಾಸನೆ ಅಷ್ಟೆ ಅಲ್ಲ ನೋಡಲು ಕೂಡ ಸುಂದರವಾಗಿಸುತ್ತದೆ.

Also read
» ಸಖತ್ ಶೈನಿ ಕೂದಲು ಪಡೆಯಲು ಏಳೇ ಮಾರ್ಗ
» ಕಂಕುಳನ್ನು ಕ್ಲೀನ್ ಆಗಿಡಲು ಕೆಲ ಸಲಹೆ..
» ಬಾಚಣಿಕೆ, ಹೇರ್ ಬ್ರಶ್ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ?
» ಕೂದಲು ಗಂಟಾಗುವುದನ್ನು ತಡೆಯುವ ಉಪಾಯ