ಹೊಳೆಯುವ ಕೂದಲಿನ ಒಡೆಯರಾಗಲು ಈ ವಿಧಾನ
Wednesday, February 22, 2012, 15:47 [IST]
Natural Hair Care
ಮೃದುವಾದ ಮತ್ತು ಹೊಳಪಿನ ಕೂದಲಿನ ಒಡೆಯರಾಗಲು ಎಲ್ಲರೂ ಇಷ್ಟ ಪಡುತ್ತಾರೆ. ಕೆಲವರಿಗೆ ಮಾತ್ರ ಈ ರೀತಿಯ ಕೂದಲು ನೈಸರ್ಗಿಕವಾಗಿ ದೊರೆಯುತ್ತದೆ. ಆದರೆ ಕೆಲವೊಂದು ನೈಸರ್ಗಿಕ ವಿಧಾನವನ್ನು ಅನುಸರಿಸುವುದರ ಮುಖಾಂತರ ಸೊಂಪಾದ ಮತ್ತು ಹೊಳಪಿನ ಕೂದಲನ್ನು ಪಡೆಯಬಹುದು. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಆಕರ್ಷಕ ಕೂದಲು ಪಡೆಯಬಹುದು.

1. ತಲೆಕೂದಲು ಸೊಂಪಾಗಿ ಬೆಳೆಯಲು ಹರಳೆಣ್ಣೆಯನ್ನು ಹಚ್ಚುವುದು ಒಳ್ಳೆಯದು.

2. ವಾರಕ್ಕೊಮ್ಮೆ ಟೀಯನ್ನು ತಲೆಗೆ ಹಚ್ಚಿ ತೊಳೆದರೆ ತಲೆಕೂದಲು ಕಪ್ಪಾಗಿ ಮತ್ತು ಹೊಳಪಿನಿಂದ ಕೂಡಿರುತ್ತದೆ.

3.
ಕಡಲೆಹಿಟ್ಟನ್ನು ಅನ್ನದ ಗಂಜಿಯಲ್ಲಿ ಕಲೆಸಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಬೇಕು.

4.ಒಂದು ಹಿಡಿ ನೆಲ್ಲಿಕಾಯಿಯನ್ನು 1 ಗ್ಲಾಸ್ ಹಾಲಿನಲ್ಲಿ ನೆನೆಹಾಕಿ ನಂತರ ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಒಂದು ಗಂಟೆ ಬಳಿಕ ತೊಳೆಯಬೇಕು.

5. ಮೊಟ್ಟೆಯ ಬಿಳಿಗೆ 1 ಚಮಚ ಹರಳೆಣ್ಣೆ, 1 ಚಮಚ ಗ್ಲಿಸರಿನ್ ಮಿಶ್ರ ಮಾಡಿ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆದರೆ ಕೂದಲು ಹೊಳಪಿನಿಂದ ಕೂಡಿರುತ್ತದೆ.

6. ತಲೆಗೆ ಸ್ವಲ್ಪ ಬಿಸಿ ಇರುವ ತೆಂಗಿನೆಣ್ಣೆ ಹಚ್ಚಿ, ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ಅದರ ನೀರನ್ನು ಹಿಂಡಿ ತಲೆಗೆ ಸುತ್ತಬೇಕು. ನಂತರ ಒಂದು ಗಂಟೆಯ ಬಳಿಕ ತೊಳೆಯಬೇಕು. ಈ ರೀತಿ ಮಾಡಿದರೆ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.

7. ತೆಂಗಿನೆಣ್ಣೆ ಜೊತೆ ದಾಸವಾದ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.

8. ಕೂದಲನ್ನು ತೊಳೆಯಲು ಸೀಗೆಕಾಯಿಗೆ ಸ್ವಲ್ಪ ನಿಂಬೆಕಾಯಿ ಹಿಂಡಿ, ಆ ಮಿಶ್ರಣದಿಂದ ತಲೆ ತೊಳೆದರೆ ಕೂದಲು ಆಕರ್ಷಕವಾಗಿ ಕಾಣುವುದು.
Also read
» ಅಂದದ ಕೂದಲಿಗಾಗಿ ಮೆಹಂದಿಯ ಆರೈಕೆ
» ಕೂದಲಿನ ಆರೈಕೆಯಲ್ಲಿ ಮೊಸರಿನ ಪಾತ್ರ
» ಕೂದಲು ಗಂಟಾಗುವುದನ್ನು ತಡೆಯುವ ಉಪಾಯ
» ಕೂದಲಿನ ಸಕಲ ಪೋಷಣೆಗೆ ಏನು ಮಾಡಬೇಕು?