ಮೇಕಪ್ ನಿಂದ ನಿಮ್ಮ ತ್ವಚೆ ಮೇಲೆ ಗುಳ್ಳೆ, ಅಲರ್ಜಿ ಇನ್ನಿತರ ಕಲೆ ಕಾಣಿಸಿಕೊಳ್ಳುತ್ತಿದೆಯಾ? ಅದಕ್ಕೆ ಮೇಕಪ್ ಸಾಧನಗಳನ್ನು ದೂಷಿಸಬೇಕಿಲ್ಲ, ಅದನ್ನು ಬಳಸುವ ಮತ್ತು ತೆಗೆಯುವ ರೀತಿಯೂ ಸಮಸ್ಯೆಗೆ ಕಾರಣವಿರಬಹುದು. ಮಲಗುವ ಮುನ್ನ ಮೇಕಪ್ ತೆಗೆಯಲು ಈ ಟಿಪ್ಸ್ ಅನುಸರಿಸಿದರೆ ತ್ವಚೆಗೆ ಅನಗತ್ಯ ತೊಂದರೆ ಉಂಟಾಗುವುದನ್ನು ತಪ್ಪಿಸುವುದು ಸಾಧ್ಯ.
ಮೇಕಪ್ ತೆಗೆಯುವ ಸುಲಭ ವಿಧಾನ ಹೀಗಿದೆ:
1. ಮೇಕಪ್ ತೆಗೆಯದೆ ಮಲಗಬೇಡಿ, ರಾತ್ರಿಯಿಡೀ ಮೇಕಪ್ ಮುಖದ ಮೇಲಿದ್ದರೆ ಅದು ತ್ವಚೆಯ ರಂಧ್ರವನ್ನು ಮುಚ್ಚಿ ಮೊಡವೆ ಏಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಕಣ್ಣಿಗೆ ಬಳಸಿದ ಮೇಕಪ್ ಕೂಡ ಹಾಗೇ ಉಳಿಸಿದರೆ ಕಣ್ಣಿನ ಉರಿ ಅಲರ್ಜಿ ಉಂಟಾಗುತ್ತದೆ.
2. ಕಣ್ಣಿನ ಮೇಕಪ್ ತೆಗೆಯಲು ಹತ್ತಿಗೆ ಕೊಬ್ಬರಿ ಅಥವಾ ಆಲಿವ್ ಎಣ್ಣೆ ಸೋಕಿಸಿ ಒರೆಸಿ ನೀರು ಹಾಕಿಕೊಂಡು ಐ ಶ್ಯಾಡೊ, ಐ ಲೈನರ್ ಮತ್ತು ಮಸ್ಕಾರ ಹೋಗುವವರೆಗೂ ತೊಳೆದುಕೊಳ್ಳಬೇಕು. ಮಕ್ಕಳಿಗೆ ಬಳಸುವ ಎಣ್ಣೆಯನ್ನೂ ಕೂಡ ಕಣ್ಣಿನ ಮೇಕಪ್ ತೆಗೆಯಲು ಬಳಸಬಹುದು.
3. ಮೇಕಪ್ ತೆಗೆಯುವಲ್ಲಿ ಕ್ಲೆನ್ಸರ್ ಹೆಚ್ಚು ಪರಿಣಾಮಕಾರಿ. ನಿಮ್ಮ ತ್ವಚೆಗೆ ಸರಿಹೊಂದುವ ಕ್ಲೆನ್ಸರ್ ಖರೀದಿಸಿ, ಹತ್ತಿಯಿಂದ ಕ್ಲೆನ್ಸರ್ ಅದ್ದಿಕೊಂಡು ಒರೆಸಿ ಸುಲಭವಾಗಿ ಮೇಕಪ್ ತೆಗೆಯಬಹುದು.
4. ಕಣ್ಣಿನ ಮೇಕಪ್ ತೆಗೆಯಲು ಕ್ಲೆನ್ಸರ್ ಬಳಸಬಾರದು, ಹಾಗೆಯೇ ಕಣ್ಣಿನ ಮೇಕಪ್ ತೆಗೆಯಲು ಬಳಸುವ ವಿಧಾನವನ್ನು ಮುಖಕ್ಕೆ ಬಳಸಬಾರದು.
5. ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ ಹೋಗುತ್ತದೆ.
6. ಮುಖದ ಮೇಕಪ್ ತೆಗೆಯುವಾಗ, ಕುತ್ತಿಗೆ ಮತ್ತು ಕಿವಿಯ ಹಿಂದಿನ ಭಾಗವನ್ನು ಒಮ್ಮೆ ಹತ್ತಿಯಿಂದ ಒರೆಸುವುದನ್ನು ಮರೆಯಬೇಡಿ. ಎರಡು ಬಾರಿ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದು, ಕೊನೆಗೆ ನಿಮ್ಮ ಮುಖಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚಿಕೊಂಡು ಮಲಗಬಹುದು.
» ಸುಂದರ ಮೊಣಕಾಲಿಗೆ ದೃಷ್ಟಿ ಬೊಟ್ಟು ಏಕೆ?
» ಕ್ಲೆನ್ಸಿಂಗ್ ಮಸಾಜ್ ಮಾಡಿಕೊಳ್ಳೋದು ಹೇಗೆ?
» ದಪ್ಪಗಿದ್ದವರಿಗೆ ಯಾವ ರೀತಿ ಮೇಕಪ್ ಬೇಕು?

Also read
» ತುಂಬಾ ಸಮಯ ಮೇಕಪ್ ಉಳಿಸುವ ತಂತ್ರ» ಸುಂದರ ಮೊಣಕಾಲಿಗೆ ದೃಷ್ಟಿ ಬೊಟ್ಟು ಏಕೆ?
» ಕ್ಲೆನ್ಸಿಂಗ್ ಮಸಾಜ್ ಮಾಡಿಕೊಳ್ಳೋದು ಹೇಗೆ?
» ದಪ್ಪಗಿದ್ದವರಿಗೆ ಯಾವ ರೀತಿ ಮೇಕಪ್ ಬೇಕು?