ವಾಚ್ ಕ್ರೇಝ್ ಯುವತಿಯರಿಗೆ ಬೆಸ್ಟ್ ವಾಚ್ ಬ್ರ್ಯಾಂಡ್
Saturday, November 5, 2011, 12:55 [IST]
Leading Watch Brands for Women
ವಾಚ್ ಈಗ ಕೇವಲ ಅವಶ್ಯಕತೆ ಮಾತ್ರವಲ್ಲ, ಫ್ಯಾಷನ್, ಪ್ರತಿಷ್ಟೆಯೂ ಹೌದು, ಅದರಲ್ಲೂ ಮಹಿಳೆಯರಿಗೆ ವಾಚ್ ಕಲೆಕ್ಷನ್ ಬಗ್ಗೆ ಆಸಕ್ತಿ ಹೆಚ್ಚು. ಸ್ಟೈಲಿಶ್ ಮತ್ತು ಸುಂದರ ವಾಚ್ ಕೊಂಡುಕೊಳ್ಳುವ ಹಂಬಲವಿದ್ದರೆ ಒಮ್ಮೆ ಈ ವಾಚ್ ಬ್ರ್ಯಾಂಡ್ ಗಳತ್ತ ಕಣ್ಣು ಹಾಯಿಸಿ.

ಐದು ಅತ್ಯುನ್ನತ ವಾಚ್ ಬ್ರ್ಯಾಂಡ್ ಇಲ್ಲಿದೆ

ಗೆಸ್: ಮಹಿಳೆಯರಿಗೆಂದು ಹೊಸ ಶೂ, ಹ್ಯಾಂಡ್ ಬ್ಯಾಗ್ ಮತ್ತು ವಾಚ್ ಗಳನ್ನು ಬಿಡುಗಡೆಮಾಡುವ ಗೆಸ್ ನ ಬ್ರ್ಯಾಂಡ್ ವಾಚ್ ಗಳು ಮಹಿಳೆಯರಿಗೆ ಚೆಂದ. ಯುವತಿಯರಿಗೆ ಸಾಫ್ಟ್ ಲುಕ್ ಕೊಡುವ ಈ ವಾಚ್ ಸ್ಟೇನ್ ಲೆಸ್ ಸ್ಟೀಲ್ ಜೊತೆ ಡೈಮಂಡ್ ಹರಳುಗಳನ್ನು ಸೇರಿಸಿ ಮಾಡಲಾಗಿರುತ್ತೆ. 30-33 ಎಂಎಂ ಅಳತೆ ಹೊಂದಿರುವ ಈ ವಾಚ್ ನಿಮ್ಮ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ರೋಲೆಕ್ಸ್: ವಾಚ್ ತಯಾರಿಕೆಯಲ್ಲಿ ಪ್ರಪಂಚದಲ್ಲಿ ಮುಂದಿರುವ ಕಂಪನಿ ರೋಲೆಕ್ಸ್. ಲಕ್ಸುರಿ ವಾಚ್ ಗಳನ್ನು ಬಯಸುವವರು, ಅಥವಾ ವಾಚನ್ನು ಗಿಫ್ಟ್ ಕೊಡಲು ಬಯಸುವವರಿಗೆ ಇದು ಸೂಕ್ತ ಆಯ್ಕೆ. ಮಹಿಳೆಯರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಈ ವಾಚ್ ಎಲ್ಲರ ಗಮನವನ್ನೂ ತಕ್ಷಣವೇ ತನ್ನೆಡೆಗೆ ಸೆಳೆಯುತ್ತೆ.

ಮಾಂಟ್ ಬ್ಲಾಂಕ್: ಜರ್ಮನ್ ನ ಈ ಕಂಪನಿಯಲ್ಲಿ ಸ್ಪೋರ್ಟ್, ಸಾಮಾನ್ಯ, ಫಾರ್ಮಲ್ ವಿನ್ಯಾಸದಲ್ಲಿರುವ ಅನೇಕ ಬ್ರ್ಯಾಂಡ್ ವಾಚ್ ಲಭ್ಯವಿದೆ. ನೀವು ಉತ್ತಮ ವಾಚ್ ಬಯಸುವುದಾದರೆ ಮಾಂಟ್ ಬ್ಲಾಕ್ ಒಳ್ಳೆಯ ಆಯ್ಕೆ.

ಸಿಟಿಝನ್: ಕಡಿಮೆ ಬೆಲೆಯ ಈ ವಾಚ್ ಮಹಿಳೆಯರಿಗೆ ತಕ್ಕುದಾಗಿದೆ. ಕಡಿಮೆ ಬೆಲೆಗೆ ಉನ್ನತ ಗುಣಮಟ್ಟದ ವಾಚ್ ನೀಡುವಲ್ಲಿ ಸಿಟಿಝನ್ ಕಂಪನಿ ಮುಂದಿದೆ. ಇದರ ಬಾಳಿಕೆ ಬಗ್ಗೆ ಮಾತನಾಡುವಂತೆಯೇ ಇಲ್ಲ. ದಿನಬಳಕೆಗೆ ಉತ್ತಮವಾದ ವಾಚ್ ಬಯಸುವವರಿಗೆ ಇದು ಚೆಂದ.

ಚೋಪಾರ್ಡ್: ಡೈಮಂಡ್ ಹರಳನ್ನು ಸೇರಿಸಿ ತಯಾರಿಸಲಾಗುವ ಈ ವಾಚ್ ಮಹಿಳೆಯರ, ಹುಡುಗಿಯರ ಕಣ್ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಸಾಮಾನ್ಯವಾಗಿ ಮಹಿಳೆಯರಿಗೆ ಇಷ್ಟವೆನಿಸುವ ಅನೇಕ ಬಣ್ಣಗಳಲ್ಲಿ ವಾಚ್ ಇರುತ್ತವೆ.

ಉತ್ತಮ ವಾಚ್ ಕಲೆಕ್ಷನ್ ಬೇಕೆಂದರೆ ಮಹಿಳೆ, ಯುವತಿಯರು ಗ್ಯುಸ್ಸಿ, ಒಮೆಗಾ, ಸ್ವಾಚ್ ಮುಂತಾದ ಕಂಪನಿಗಳಿಂದಲೂ ಕೊಂಡುಕೊಳ್ಳಬಹುದು.
Also read
» ಹೈ ಹೀಲ್ಸ್ ನಿಮ್ಮ ಪಾದಗಳಿಗೆ ಮುಳ್ಳಾಗದಿರಲಿ
» ನಿಮ್ಮ ಮುಖಕ್ಕೆ ಒಪ್ಪುವ ಕಿವಿಯೋಲೆ ಯಾವುದು?
» ಮಾಡರ್ನ್ ಹುಡುಗನಿಗೆ ಫ್ಯಾಷನೇಬಲ್ ಗಡ್ಡ
» ಈ ರೀತಿ ಡ್ರೆಸ್ ಮಾಡಿದರೆ ಕುಳ್ಳಗೆ ಕಾಣಿಸುವುದಿಲ್ಲ