ನಿಮ್ಮ ಮುಖಕ್ಕೆ ಒಪ್ಪುವ ಕಿವಿಯೋಲೆ ಯಾವುದು?
Saturday, November 26, 2011, 15:56 [IST]
What Type Of What Earrings Suit Your Face
ಹೆಣ್ಣು ಎಷ್ಟೆ ಸುಂದರವಾಗಿದ್ದರೂ ಅವಳ ಸೌಂದರ್ಯ ಎದ್ದು ಕಾಣಲು ತಕ್ಕಮಟ್ಟಿಗಿನ ಅಲಂಕಾರ ಮಾಡಿಕೊಳ್ಳಬೇಕು.

ಹೀಗೆ ಮುಖ್ಯವಾದ ಅಲಂಕಾರದಲ್ಲಿ ಕಿವಿಯೋಲೆ ಕೂಡ ಒಂದು. ಓಲೆಯಲ್ಲಿ ದೊಡ್ಡದು, ಚಿಕ್ಕದ್ದು ಹೀಗೆ ವಿವಿಧ ವಿನ್ಯಾಸವಿದೆ.ಎಲ್ಲಾ ವಿನ್ಯಾಸವು ಎಲ್ಲರಿಗೂ ಸರಿ ಹೊಂದುವುದಿಲ್ಲ.

ದುಂಡು ಮುಖದವರಿಗೆ ಗುಂಡಗಿನ ಓಲೆ ಚೆಂದ. ಅದೇ ರೀತಿ ಬೇರೆ-ಬೇರೆ ಮುಖದ ಆಕಾರ ಹೊಂದಿದವರಿಗೆ ಯಾವ ರೀತಿಯ ಓಲೆ ಚೆನ್ನಾಗಿ ಕಾಣಿಸುತ್ತದೆ ತಿಳಿಯೋಣ ಬನ್ನಿ.

1. ಅಗಲ ಮುಖ: ಅಗಲ ಮುಖದವರು ಚಿಕ್ಕದಾದ ಗುಂಡನೆಯ ಓಲೆ ಹಾಕಿಕೊಳ್ಳದಿರುವುದು ಒಳ್ಳೆಯದು. ಏಕೆಂದರೆ ಅಂತಹ ಓಲೆಗಳು ಮುಖದಲ್ಲಿ ಎದ್ದು ಕಾಣುವುದಿಲ್ಲ. ಅಗಲವಾದ ಮುಖ ಅಂದರೆ ದಪ್ಪವಿರುವವರು ಎಂದಲ್ಲ, ಸಣ್ಣಗಿರುವ ಕೆಲವರ ಮುಖ ಕೂಡ ಅಗಲವಾಗಿರುತ್ತದೆ. ಅಂಥವರು ಅಗಲದ, ನಾಣ್ಯದ ಆಕಾರದ ಓಲೆ ಹಾಕಿಕೊಳ್ಳುವುದರಿಂದ ಚೆಂದ ಕಾಣಬಹುದು.

2. ಚಿಕ್ಕ ಮುಖ: ಇಂತಹವರು ಚಿಕ್ಕ ಓಲೆಗಳನ್ನು ಧರಿಸಿದರೆ ಎದ್ದು ಕಾಣುವುದರ ಜೊತೆ ಸುಂದರವಾಗಿ ಕಾಣುತ್ತಾರೆ, ಆದರೆ ತುಂಬಾ ಡೊಡ್ಡದಾದ ರಿಂಗ್ ಅಥವಾ ಓಲೆ ಇವರ ಮುಖಕ್ಕೆ ಒಪ್ಪುವುದಿಲ್ಲ.

3.ಉದ್ದ ಮುಖ:
ಓಲೆಯಲ್ಲಿ S ಆಕಾರ, ಮೊಟ್ಟೆಯ ಆಕಾರ, ದುಂಡಗಿನ ಓಲೆಗಳನ್ನು ಧರಿಸಬಹುದಾಗಿದ್ದು ತುಂಬಾ ಉದ್ದದ ಓಲೆ ಧರಿಸುವುದರಿಂದ ಮುಖ ಮತ್ತಷ್ಟು ಕೋಲು ಮುಖವಾಗಿ ಕಾಣುತ್ತದೆ.

4. ಚೌಕಾರದ ಮುಖ : ಚೌಕಾಕಾರದ ಮುಖದ ಆಕಾರ ಹೊಂದಿರುವವರು ಹುಡುಗಿಯರಿಗೆಂದೇ ಇರುವ ಓಲೆಗಿಂತ ಹುಡುಗರು ಧರಿಸುವಂತಹ ಓಲೆಯನ್ನು ಧರಿಸಿದರೆ ಚೆನ್ನಾಗಿರುತ್ತೆ. ನೋಡಲು ಸಹ ಬೋಲ್ಡ್ ಲುಕ್ ಕೊಡುತ್ತದೆ. ನಕ್ಷತ್ರ ರೀತಿಯ, ತ್ರಿಕೋನಾಕಾರದ ಓಲೆಗಳು ಚೆಂದ ಕಾಣುತ್ತದೆ.

5. ಮೊಟ್ಟೆಯಾಕಾರದ ಮುಖ: ಮೊಟ್ಟೆಯಾಕಾರದ ಮುಖ ಹೊಂದಿದ್ದವರು ಯಾವುದೆ ವಿನ್ಯಾಸದ ಓಲೆಯನ್ನು ಧರಿಸಿದರೂ ಅಂದವಾಗಿ ಕಾಣಿಸುತ್ತಾರೆ. ಆದರೆ ಧರಿಸುವ ಓಲೆ ಹಾಕಿರುವ ಬಟ್ಟೆ ಅಥವಾ ಕೂದಲಿನ ವಿನ್ಯಾಸಕ್ಕೆ ಸರಿಹೊಂದುವ ಹಾಗೆ ಇದ್ದರೆ ಸಾಕು.
Also read
» ಕೆಂಪು ಬಟ್ಟೆಯಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್
» ಬೆರಳಂಚಿನಲ್ಲಿ ಅಡಗಿದೆ ನಿಮ್ಮ ಸೌಂದರ್ಯ
» ಟೂಥ್ ಪೇಸ್ಟ್ ನಲ್ಲಿ ಬ್ಯೂಟಿಗೆ ಬೇಕಾದ್ದು ಏನಿದೆ?
» ನೈಸರ್ಗಿಕವಾಗಿ ವ್ಯಾಕ್ಸ್ ತಯಾರಿಸುವ ವಿಧಾನ