ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟ್ ನ ದರಬಾರು
Thursday, December 15, 2011, 17:01 [IST]
Men Fashion Tips
ಹರಿದ ಜೀನ್ಸ್ ಹಾಕುವ ಫ್ಯಾಷನ್ ಹೊಸದೇನು ಅಲ್ಲ. ಜನಪ್ರಿಯ ಸಿನಿಮಾ ತಾರೆಗಳು, ಕ್ರಿಕೆಟ್ ತಾರೆಯರು ಕಾಲೇಜು ಹುಡುಗರಿಗೆ ಹರಿದ ಪ್ಯಾಂಟ್ ಧರಿಸುವುದು ಒಂದು ಫ್ಯಾಷನ್ ಆಗಿದೆ. ಈ ರೀತಿಯ ಹರಿದ ಪ್ಯಾಂಟ್ ಮೇಲೆ ಟಿ ಶರ್ಟ್ ಅಥವಾ ಶರ್ಟ್ ಧರಿಸಬಹುದಾಗಿದ್ದು ಅದರ ಜೊತೆ ಈ ಕೆಳಗಿನ ಟಿಪ್ಸ್ ಪಾಲಿಸಿದರೆ ಮತ್ತಷ್ಟು ಫ್ಯಾಷನ್ ಆಗಿ ಕಾಣಬಹುದು.

1. ಹರಿದ ಪ್ಯಾಂಟ್ ನೋಡಲು ಕೂಡ ಹಳೆಯ ಜೀನ್ಸ್ ತರ ಕಂಡರನೆ ಚಂದ. ಅದ್ದರಿಂದ ಹಳೆಯ ಜೀನ್ಸ್ ಪ್ಯಾಂಟ್ ತೆಗೆದು ಬ್ಲೇಡ್ ನಿಂದ ಮಂಡಿ ಮತ್ತು ತೊಡೆಯ ಭಾಗದಲ್ಲಿ ಹರಿದು ಧರಿಸಬಹುದು.

2. ಪ್ಯಾಂಟ್ ಕತ್ತರಿಸುವ ಮೊದಲು ಎಲ್ಲಿ ಕತ್ತರಿಸ ಬೇಕೆಂದು ಗುರುತು ಹಾಕಿಕೊಳ್ಳಬೇಕು. ತೊಡೆ ದಪ್ಪವಾಗಿದ್ದರೆ ಅಡ್ಡವಾಗಿ ಕತ್ತರಿಸುವ ಬದಲು ಜೀನ್ಸ್ ಸ್ವಲ್ಪ ಓರೆ ಗೆರೆಯಂತೆ ಕತ್ತರಿಸಿದರೆ ನೋಡಲು ರಾಕಿಂಗ್ ಲುಕ್ ಕೊಡುತ್ತದೆ.

3. ಲೋ ವೇಯಿಸ್ಟ್ ಪ್ಯಾಂಟ್ ಗೆ ಟೈಟ್ ಟಿ ಶರ್ಟ್ ಧರಿಸಿದರೆ ಚೆನ್ನಾಗಿ ಒಪ್ಪುತ್ತೆ.

4. ಹರಿದ ಪ್ಯಾಂಟ್ ಗೆ ಶೂ ಬದಲು ಚಪ್ಪಲಿ ಧರಿಸಿದರೆ ಸಾಮಾನ್ಯ ಲುಕ್ ಸಿಗುತ್ತದೆ.

5. ಹರಿದ ಪ್ಯಾಂಟ್ ಗೆ ಶರ್ಟ್ ಕೂಡ ಧರಿಸಬಹುದು, ಶರ್ಟ್ ಅನ್ನು ಮುಂದೆ ಮಾತ್ರ ಇನ್ ಶರ್ಟ್ ಮಾಡಿ ಲೂಸ್ ಶರ್ಟ್ ಫ್ಯಾಷನ್ ಮತ್ತು ಔಪಚಾರಿಕ ಲುಕ್ ಕೊಡುತ್ತದೆ.

6. ಈ ತರದ ಪ್ಯಾಂಟ್ ಧರಿಸಿದಾಗ ಪುರುಸರಿಗಾಗಿ ಇರುವ ಸರವನ್ನು ಧರಿಸಬಹುದು.

7. ಚಳಿಗಾಲದಲ್ಲಿ ಹರಿದ ಪ್ಯಾಂಟ್, ಟಿ ಶರ್ಟ್ ಮತ್ತು ಅದರ ಮೇಲೆ ಬ್ಲೇಝರ್ ಧರಿಸದರೆ ಮತ್ತಷ್ಟು ಸ್ಟೈಲಿಷ್ ಆಗಿ ಕಾಣಬಹುದು.
Also read
» ಈ ರೀತಿ ಡ್ರೆಸ್ ಮಾಡಿದರೆ ಕುಳ್ಳಗೆ ಕಾಣಿಸುವುದಿಲ್ಲ
» ಮೂವತ್ತು ವಯಸ್ಸಿನ ನಂತರದ ಡ್ರೆಸ್ ಸೆನ್ಸ್ ನಿಮಗೆ ಗೊತ್ತಾ?
» ಹೈ ಹೀಲ್ಸ್ ನಿಮ್ಮ ಪಾದಗಳಿಗೆ ಮುಳ್ಳಾಗದಿರಲಿ
» ವಾಚ್ ಕ್ರೇಝ್ ಯುವತಿಯರಿಗೆ ಬೆಸ್ಟ್ ವಾಚ್ ಬ್ರ್ಯಾಂಡ್