ಮುಖದಲ್ಲಿ ಮೊಡವೆ ಇದ್ದರೆ ನೋಡಲು ಕಿರಿ ಕಿರಿ. ಅದರಲ್ಲೂ ಕೆನ್ನೆ ಮೇಲೆ ಮೊಡವೆ ಆದರೆ ಆ ಕಲೆಗಳು ಹಾಗೆಯೇ ಉಳಿದುಕೊಂಡುಬಿಡುತ್ತವೆ. ಇದರಿಂದ ಮುಖದ ಕಳೆಯೇ ಕುಂದುಹೋಗಬಹುದು. ಆದ್ದರಿಂದ ಕೆನ್ನೆ ಮೇಲಿನ ಮೊಡವೆ ಕಲೆ ಹೋಗಿಸಿ ಸ್ಫುಟವಾದ ತ್ವಚೆ ಪಡೆಯುವುದು ಹೇಗೆ ಎಂದು ಇಲ್ಲಿ ನೀಡಿರುವ ಕೆಲವು ಸಲಹೆಗಳ ಮೂಲಕ ತಿಳಿದುಕೊಳ್ಳಿ.
ಕೆನ್ನೆ ಮೇಲಿನ ಮೊಡವೆ ಕಲೆ ನಿವಾರಣೆಗೆ ಸಲಹೆ:
1. ತುಟಿಯ ಕೆಳಗೆ ಗದ್ದದಲ್ಲಿ ಕಾಣಿಸಿಕೊಳ್ಳುವ ವೈಟ್ ಹೆಡ್ ಗಳನ್ನು 15 ದಿನಕ್ಕೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು. ಈ ವೈಟ್ ಹೆಡ್ ಗಳೇ ಕೆನ್ನೆಯ ಮೇಲೆ ಮೊಡವೆ ಏಳಲು ಕಾರಣವಾಗುತ್ತದೆ. ಹಬೆ ತೆಗೆದುಕೊಳ್ಳುವುದು ವೈಟ್ ಹೆಡ್ ಹೋಗಲಾಡಿಸುವ ಸುಲಭ ವಿಧಾನ. ಹಬೆ ತೆಗೆದುಕೊಂಡು ಹತ್ತಿಯಿಂದ ನಯವಾಗಿ ಉಜ್ಜಿ ತೆಗೆದರೆ ವೈಡ್ ಹೆಡ್ ಸುಲಭವಾಗಿ ನಿವಾರಣೆಯಾಗುತ್ತದೆ.
2. ಹೆಚ್ಚಾಗಿ ನೀರನ್ನು ಸೇವಿಸುವುದು ಒಳಗಿನಿಂದಲೇ ದೇಹ ಮತ್ತು ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಹೆಚ್ಚು ನೀರಿನ ಸೇವನೆ ಮೊಡವೆ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
3. ಮೊಡವೆ ಕಲೆಗಳನ್ನು ಹೋಗಿಸಲು ಆಲೂಗಡ್ಡೆ ತಿರುಳಿನಿಂದ ಅಥವಾ ಪಪ್ಪಾಯ ತಿರುಳಿನಿಂದ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು.
4. ಅಡುಗೆ ಸೋಡಾವನ್ನು ಮೊಡವೆ ಆದ ಜಾಗದ ಮೇಲೆ ನಯವಾಗಿ ಮಸಾಜ್ ಮಾಡಿದರೆ ಕ್ರಮೇಣ ಕಲೆ ನಿವಾರಣೆಯಾಗುತ್ತದೆ.
5. ಮೊಡವೆ ಅಥವಾ ಕಲೆಯ ಮೇಲೆ ಇಂಗು ಅಥವಾ ಗಂಧಧಪುಡಿಯಿಂದ ಮಸಾಜ್ ಮಾಡಿಕೊಂಡರೆ ಉತ್ತಮ ಪರಿಣಾಮ ಬೀರುತ್ತದೆ.
6. ಕರಿದ ಎಣ್ಣೆ ಪದಾರ್ಥಗಳನ್ನು ಮತ್ತು ನಕಲಿ ಬಣ್ಣಗಳನ್ನು ಉಪಯೋಗಿಸಿ ಆಹಾರವನ್ನು ಸೇವಿಸದಿದ್ದರೆ ಮೊಡವೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
7. ಆಗಾಗ್ಗೆ ಟೊಮೆಟೊ ಅಥವಾ ಸೌತೆಕಾಯಿಯೊಂದಿಗೆ ನಿಂಬೆ ರಸ ಬೆರೆಸ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತೊಳೆದರೂ ಉತ್ತಮ ಪರಿಣಾಮ ನೀಡಬಹುದು. ಆದರೆ ಒಬ್ಬೊಬ್ಬರಿಗೆ ನಿಂಬೆರಸ ಹೆಚ್ಚು ಬಳಸಿದರೆ ಗುಳ್ಳೆಗಳೂ ಏಳಬಹುದು. ಆದ್ದರಿಂದ ಪರೀಕ್ಷಿಸಿದ ನಂತರವಷ್ಟೇ ಇವುಗಳ ಬಳಕೆ ಮಾಡಿದರೆ ಒಳಿತು.
» ಬೆವರಿನಿಂದ ಬಳಲದಿರಲಿ ನಿಮ್ಮ ಚೆಂದದ ಪಾದ
» ಕೆಮಿಕಲ್ ಗೆ ನೋ ಎನ್ನುವ ಈ ಬ್ಲೀಚ್ ಯಾವುದು?
» ಸ್ಕಿನ್ ಕೇರ್ ಮಾಡುವುದು ಈ ಕ್ಯಾರೆಟ್ ಜ್ಯೂಸ್

Also read
» ಮೇಕಪ್ ಕ್ರೀಮ್ ನಿಂದಲೆ ಕನ್ಸೀಲರ್ ಟಚ್» ಬೆವರಿನಿಂದ ಬಳಲದಿರಲಿ ನಿಮ್ಮ ಚೆಂದದ ಪಾದ