ಹುಣ್ಣಿಮೆಯ ಚೆಲುವಿಗಾಗಿ ಫೇಸ್ ಪ್ಯಾಕ್
Friday, November 4, 2011, 14:38 [IST]
Face Packs
ಹೊಳೆಯುವ ತ್ವಚೆ ಯಾರಿಗೆ ತಾನೆ ಬೇಡ ಅದಕ್ಕಾಗಿ ಕ್ರೀಮ್, ಫೇಸ್ ಪ್ಯಾಕ್ ಅದು ಇದು ಅಂತ , ಆದರೆ ಇಂತಹ ಸೌಂದರ್ಯವರ್ಧಕ ಸಾಧನಗಳು ನೈಜ ಸೌಂದರ್ಯವನ್ನು ನೀಡುವುದಿಲ್ಲ, ಕೆಲವೊಮ್ಮೆ ಕ್ರೀಮ್ ಗಳಿಂದ ತ್ವಚೆಯ ಸಮಸ್ಯೆ ಸಹ ಕಾಣಿಸಿಕೊಳ್ಳಬಹುದು, ಆದ್ದರಿಂದ ಯಾವತ್ತಿಗೂ ನೈಸರ್ಗಿಕ ಪದ್ಧತಿಯನ್ನು ಅನುಸರಿಸಿದರೆ ಮುಖದ ಕಾಂತಿ ಹೆಚ್ಚುವುದು, ಅಲ್ಲದೆ ಇವುಗಳಿಂದ ಯಾವುದೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ತ್ವಚೆಯ ನೈಜ ಕಾಂತಿಗಾಗಿ ಈ ಕೆಳಗಿನಂತೆ ಮಾಡಬಹುದಾಗಿದೆ

1.ಮೊಟ್ಟೆ ಮತ್ತು ಬಾದಾಮಿ: ಈ ರೀತಿಯ ಫೇಸ್ ಪ್ಯಾಕ್ ಎಲ್ಲಾ ರೀತಿಯ ತ್ವಚೆಗೆ ಹೊಂದಾಣಿಕೆಯಾಗುವುದು. ಅಲ್ದೆ ಈ ಫೇಸ್ ಪ್ಯಾಕ್ ಮಾಡುತ್ತಿದ್ದರೆ ಮುಖದಲ್ಲಿ ಬೇಗನೆ ಮುಪ್ಪಿನ ಛಾಯೆ ಕಾಣಿಸಿಕೊಳ್ಳುವುದಿಲ್ಲ. ಈ ಪ್ಯಾಕ್ ಗಾಗಿ ಮೊಟ್ಟೆಯಲ್ಲಿ 2 ಹನಿ ಬಾದಾಮಿ ಹಾಕಿ , ರೋಸ್ ವಾಟರ್ ಬೇಕಾದರೂ ಸೇರಿಸಬಹುದು, ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15 ನಿಮಿಷ ನಂತರ ತಣ್ಣೀರಿನಿಂದ ತೊಳೆಯಬೇಕು.

2. ಮುಲ್ತಾನಿಮಿಟಿ: ಮುಲ್ತಾನಿಮಿಟಿಯನ್ನು ಹಚ್ಚಿಕೊಳ್ಳುವುದು ಮುಖಕ್ಕೆ ತುಂಬಾನೆ ಒಳ್ಳೆಯದು, ಈ ಪ್ಯಾಕ್ ಜೊತೆ ಸ್ವಲ್ಪ ಗ್ಲಿಸರಿನ್ ಬೆರೆಸಿ ಹಾಕಿದರೆ ಅಕಾಲಿಕ ಮುಪ್ಪನ್ನು ತಡೆಯಬಹುದು. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು.

3. ಮೊಸರು ಮತ್ತು ಬಾಳೆಹಣ್ಣು: ಬಾಳೆಹಣ್ಣನ್ನು ಮೊಸರಿನಲ್ಲಿ ಹಾಕಿ ಚೆನ್ನಾಗಿ ಕಿವುಚಿ ಅದಕ್ಕೆ ಸ್ವಲ್ಪ ಜೇನು ಮತ್ತು ನಿಂಬೆರಸ ಹಾಕಿ ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು, ನಂತರ ಮೊದಲು ಹತ್ತಿಯನ್ನು ಹಾಲಿನಲ್ಲಿ ಅದ್ದಿ ಉಜ್ಜಿ ಆ ನಂತರ ತಣ್ಣೀರಿನಲ್ಲಿ ಮುಖ ತೊಳೆಯಬೇಕು.

4. ಸೌತೆಕಾಯಿ ಮತ್ತು ಮುಲ್ತಾನಿಮಿಟಿ : ಸೌತೆಕಾಯಿಗೆ ಮುಲ್ತನಿಮಿಟಿ, ರೋಸ್ ವಾಟರ್ ಮತ್ತು ಜೇನು ಬೆರೆಸಿ ಪೇಸ್ಟ್ ಮಾಡಿ ಹಚ್ಚಬೇಕು, 20 ನಿಮಿಷದ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಬೇಕು.
Also read
» ಚಳಿಗಾಲದಲ್ಲಿ ಬಿರುಕು ಚರ್ಮದ ರಕ್ಷಣೆ ಹೇಗೆ?
» ಮುಖಕ್ಕೆ ಜೀವ ತುಂಬುತ್ತೆ ಮಣ್ಣಿನ ಲೇಪನ
» ಮೋಡಿಮಾಡಲಿ ನಿಮ್ಮ ಬೆನ್ನಿನ ಸೌಂದರ್ಯ
» ನಾಜೂಕಿನಂಥ ತ್ವಚೆ ಪಡೆಯಲು ನಾಲ್ಕು ಸಲಹೆ