ಆಲ್ಕೊಹಾಲ್ ಕುಡಿಯೋಕಲ್ಲ, ನಿಮ್ಮ ಸೌಂದರ್ಯಕ್ಕೆ ಬಳಸಿ
Thursday, November 17, 2011, 16:04 [IST]
Alcohol for Skin Care
ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ತ್ವಚೆಗೆ ಇದು ತುಂಬಾ ಉಪಯೋಗಕ್ಕೆ ಬರುತ್ತೆ. ಕೆಲವು ರೀತಿಯ ಮದ್ಯದಲ್ಲಿರುವ ಕೆಲ ಅಂಶಗಳು ಚರ್ಮವನ್ನು ಶುದ್ಧ, ಮೃದುಗೊಳಿಸಿ ತ್ವಚೆಗೆ ಕಳೆ ನೀಡುತ್ತದೆ.

ಆಲ್ಕೊಹಾಲನ್ನು ಫೇಸ್ ಪ್ಯಾಕ್, ಮಾಸ್ಕ್, ಟೋನರ್, ಕ್ಲೆನ್ಸರ್ ಗೂ ಬಳಸಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅದು ಹೇಗೆಂದು ಮುಂದೆ ತಿಳಿಯಿರಿ.

ತ್ವಚೆ ಸಂರಕ್ಷಣೆಗೆ ಬಳಸಬಹುದಾದ 4 ರೀತಿಯ ಆಲ್ಕೊಹಾಲ್:

* ವೈನ್: ವೈನ್ ಫೇಶಿಯಲ್ ಇದೀಗ ಹೆಚ್ಚು ಪ್ರಚಲಿತದಲ್ಲಿದೆ. ಈ ಫೇಶಿಯಲ್ ಚರ್ಮದಲ್ಲಿನ ನಿರ್ಜೀವ ಕಣಗಳನ್ನು ಹೋಗಲಾಡಿಸಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಇದು ತ್ವಚೆಯಲ್ಲಿ ಚೈತನ್ಯ ತುಂಬಿರುವಂತೆ ನೋಡಿಕೊಳ್ಳುತ್ತದೆ.

ಫೇಶಿಯಲ್: ಕೆಂಪು ವೈನ್ ಗೆ ಜೇನು ಬೆರೆಸಿ ಹಚ್ಚಿಕೊಂಡು 1 ಗಂಟೆ ಮಸಾಜ್ ಮಾಡಿಕೊಂಡು ಒಣಗಿದನ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಬಣ್ಣ ಕಳೆಗುಂದುವುದು, ಕಲೆ ಮತ್ತು ಟ್ಯಾನ್ ಸಮಸ್ಯೆಯನ್ನು ಅತಿ ಬೇಗನೆ ನಿವಾರಿಸಬಹುದು.

* ಒಡ್ಕಾ: ಬಣ್ಣವಿಲ್ಲದ, ವಾಸನೆಯಿಲ್ಲದ ಒಡ್ಕಾ ಮುಖಕ್ಕೆ ಉತ್ತಮ ಹೊಳಪು ನೀಡುತ್ತೆ. ತ್ವಚೆಯನ್ನು ಶುದ್ದಗೊಳಿಸಿ ಜೀವಕಣವನ್ನು ಉಸಿರಾಡುವಂತೆ ಮಾಡುವಲ್ಲಿ ಇದು ಸಹಕಾರಿ.

ಫೇಶಿಯಲ್: 1 ಕಪ್ ಕಲ್ಲಂಗಡಿ ಜ್ಯೂಸ್ ಜೊತೆ ವೊಡ್ಕಾ ಮತ್ತು ಸ್ವಲ್ಪ ನೀರು ಬೆರೆಸಿ ಹಚ್ಚಿಕೊಳ್ಳಬಹುದು. ಇದನ್ನು 10 ದಿನದವರೆಗೂ ಇಟ್ಟುಕೊಳ್ಳಬಹುದು.

* ರಂ: ರಂನಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಅಂಶವಿದೆ. ಮೊಡವೆ ಸಮಸ್ಯೆ ಮತ್ತು ಒಣಚರ್ಮದಿಂದ ಬಳಲುತ್ತಿದ್ದವರು ಇದನ್ನು ಬಳಸಬಹುದು. ಇದನ್ನು ಪುರುಷರು ಶೇವ್ ಮಾಡಿದ ಬಳಿಕ ಹಚ್ಚಿಕೊಳ್ಳಬಹುದು.

ಫೇಶಿಯಲ್: ಹಾಲಿನ ಕೆನೆಯೊಂದಿಗೆ ರಂ ಬೆರೆಸಿ ಮೊಡವೆಗೆ ಹಚ್ಚಿಕೊಳ್ಳಬಹುದು. ರಂನಲ್ಲಿ ಉರಿನಿವಾರಕ ಅಂಶವಿರುವುದರಿಂದ ಹೆಚ್ಚು ಉಪಯೋಗಕ್ಕೆ ಬರುತ್ತೆ.

* ವಿಸ್ಕಿ: ವಿಸ್ಕಿಯನ್ನು ಫೇಸ್ ಮಾಸ್ಕ್ ನಂತೆ ಹಾಕಿಕೊಂಡರೆ ತ್ವಚೆಯನ್ನು ಸುಕ್ಕುಗಳಿಂದ, ಕಲೆಗಳಿಂದ ಮತ್ತು ಬ್ಲ್ಯಾಕ್ ಹೆಡ್ ಗಳಿಂದ ರಕ್ಷಿಸಿಕೊಳ್ಳಬಹುದು.

ಫೇಸ್ ಮಾಸ್ಕ್: ಮೊಟ್ಟೆ, ನಿಂಬೆ ರಸ ಮತ್ತು ವಿಸ್ಕಿ ಬೆರೆಸಿ ಮಾಸ್ಕ್ ನಂತೆ ಹಚ್ಚಿಕೊಂಡು ಒಣಗಿದ ನಂತರ ಬಿಸಿ ನೀರಿನಿಂದ ತೊಳೆದುಕೊಂಡರೆ ಮುಖಕ್ಕೆ ಹೊಳಪು ಬರುತ್ತದೆ. ಹಳತಾದ ಆಲ್ಕೊಹಾಲನ್ನು ಬಳಸಿದರೆ ಚರ್ಮಕ್ಕೆ ಇನ್ನೂ ಒಳ್ಳೆಯದು.
Also read
» ಚೆಂದುಟಿ ಪಡೆಯಲು ಚಿಂತೆ ಮಾಡಬೇಕಿಲ್ಲ
» ಅಂದವನ್ನು ಹೆಚ್ಚಿಸುವುದು ನೈಸರ್ಗಿಕ ಫೇಸ್ ಮಾಸ್ಕ್
» ಮನೆಯಲ್ಲೇ ಮಾಡಬಹುದು ಚಾಕಲೇಟ್ ಫೇಶಿಯಲ್
» ಇಲ್ಲಿದೆ ರೇಝರ್ ಗಾಯ ಮತ್ತು ಉರಿಗೆ ಪರಿಹಾರ