Thursday, January 12, 2012, 10:59 [IST]
ಸ್ನಾನ ಮಾಡಿದ ಮೇಲೆ ಬಾದಾಮಿ ಎಣ್ಣೆ ಹಚ್ಚಬಹುದು.

ಫೇರ್ ಅಂಡ್ ಹ್ಯಾಂಡ್ ಸಮ್ ಜಾಹೀರಾತು ನೋಡುವಾಗ ನೆನೆಪಾಗುವುದು ಪುರುಷರು ಕೂಡ ತುಂಬಾ ಒರಟಾದ ತ್ವಚೆಯನ್ನು ಬಯಸುವುದಿಲ್ಲವೆಂದು. ಸ್ವಾಭಾವಿಕವಾಗಿ ಪುರುಷರ ತ್ವಚೆ ಸ್ವಲ್ಪ ಒರಟು. ಆದರೆ ಶೇವಿಂಗ್ ಮತ್ತು ತ್ವಚೆಯ ಬಗ್ಗೆ ಹೆಚ್ಚು ಗಮನ ಹರಿಸದಿರುವುದರಿಂದ ಮುಖ ಮತ್ತಷ್ಟು ಒರಟಾಗುತ್ತದೆ. ಆದ್ದರಿಂದ ಪುರುಷರು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಆಕರ್ಷಕ ತ್ವಚೆ ಪಡೆಯಬಹುದು.
1. ಶೇವಿಂಗ್ ಮಾಡುವುದರಿಂದ ತ್ವಚೆ ಮತ್ತಷ್ಟು ಒರಟಾಗುತ್ತದೆ. ಆದ್ದರಿಂದ ಶೇವಿಂಗ್ ಮಾಡಿದ ಮೇಲೆ ಮುಖ ಮತ್ತು ಕತ್ತಿನ ಭಾಗಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು.
2. ಬಾಡಿ ಲೋಷನ್ ಸ್ತ್ರೀಯರು ಮಾತ್ರ ಹಚ್ಚಬೇಕು ಎಂಬ ನಿಯಮವೇನು ಇಲ್ಲ. ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಕಾಣಿಸಿ ಕೊಳ್ಳುವುದು ಸಹಜ. ಆದ್ದರಿಂದ ಸ್ನಾನ ಮಾಡಿದ ಮೇಲೆ ಬಾಡಿಲೋಷನ್ ಹಚ್ಚುವುದು ಒಳ್ಳೆಯದು.
3. ಹೊರಗಡೆ ಹೋಗಿ ಬಂದರೆ ಮುಖವನ್ನು ತೊಳೆಯಿರಿ, ದೂಳಿನಿಂದ ಮುಖ ಹಾಳಾಗುವುದು.
4. ಮುಖವನ್ನು ಪ್ರತಿದಿನವೂ ಕ್ಲೆನ್ಸಿಂಗ್ ಮಾಡಬೇಕು. ಇದರಿಂದ ಮುಖದಲ್ಲಿ ಬ್ಲ್ಯಾಕ್ ಹೆಡ್ ಬರುವುದಿಲ್ಲ ಅಲ್ಲದೆ ಮುಖ ಸುಂದರವಾಗಿ ಕಾಣಿಸುವುದು.
5. ಮಲಗುವ ಮೊದಲು ಮುಖಕ್ಕೆ ಆಲೀವ್ ಎಣ್ಣೆಯನ್ನು ಹಚ್ಚುವುದರಿಂದ ತ್ವಚೆ ಅಷ್ಟು ಒರಟಾಗುವುದಿಲ್ಲ, ಅಲ್ಲದೆ ಮುಖಕ್ಕೆ ಹೊಳಪು ಬರುತ್ತದೆ.
6. ಸ್ನಾನ ಮಾಡಿದ ಮೇಲೆ ಬಾದಾಮಿ ಎಣ್ಣೆಯನ್ನು ಹಚ್ಚಬಹುದು.
7. ತಿಂಗಳಲ್ಲಿ ಎರಡು ಸಲ ಮುಖ, ಕೈ, ಕಾಲು, ಪಾದ, ಮತ್ತು ಎದೆಗೆ ಸ್ಕ್ರಬ್ ಮಾಡುವುದು ಒಳ್ಳೆಯದು.
8. ದಿನಕ್ಕೆ 8-10 ಲೋಟ ನೀರು ಕುಡಿಯುವುದು ಕೂಡ ತ್ವಚೆ ಪೋಷಣೆಗೆ ಒಳ್ಳೆಯದು.
ಈ ನೈಸರ್ಗಿಕ ವಿಧಾನವು ಪುರುಷರ ಮುಖ ಕಾಂತಿಯುತವಾಗಿ ಹೊಳೆಯುವಂತೆ ಮಾಡಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
» ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟ್ ನ ದರಬಾರು
» 40 ದಾಟಿದ ಪುರುಷರ ಆರೋಗ್ಯ ಜೋಪಾನ!
» ಸುಲಭವಾಗಿ ಮೇಕಪ್ ತೆಗೆಯುವುದು ಹೀಗೆ

Also read
» ಪುರುಷರಿಗೆ ಸ್ಟೈಲಿಷ್ ಲುಕ್ ನೀಡುತ್ತೆ ಟಿ ಶರ್ಟ್» ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟ್ ನ ದರಬಾರು
» 40 ದಾಟಿದ ಪುರುಷರ ಆರೋಗ್ಯ ಜೋಪಾನ!
» ಸುಲಭವಾಗಿ ಮೇಕಪ್ ತೆಗೆಯುವುದು ಹೀಗೆ