ಮುಖದ ಕಾಂತಿ ಹೆಚ್ಚಿಸಲು ಕೆಲವು ಸಲಹೆಗಳು
Friday, January 13, 2012, 14:20 [IST]
Easy Remedies For Dry Skin
ಚಳಿಗಾಲದಲ್ಲಿ ಒಣ ತ್ವಚೆ ಹೆಚ್ಚಿನವರಿಗಿದೆ. ಚರ್ಮಕ್ಕೆ ಬೂದಿ ಮೆತ್ತಿದ ಹಾಗೆ ಒಣ ತ್ವಚೆ ಕಾಡುತ್ತದೆ. ಬಾಯಿಯ ಹತ್ತಿರ ತ್ವಚೆ ಒಣಗಿದರೆ ತುಟಿ ತನ್ನ ಹೊಳಪು ಕಳೆದುಕೊಳ್ಳುತ್ತದೆ. ತುಟಿಗಳಲ್ಲಿನ ಬಿರುಕು ಯಾರನ್ನೂ ಆಕರ್ಷಿಸುವುದಿಲ್ಲ. ಒಣ ತ್ವಚೆಯನ್ನು ಹೊಳೆಯುವ ಮೃದು ತ್ವಚೆಯಾಗಿ ಮಾಡುವುದು ಸುಲಭದ ಕೆಲಸವಲ್ಲ. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಒಣತ್ವಚೆ ಸಮಸ್ಯೆಯಿಂದ ಪಾರಾಗಬಹುದು.

1. ಸ್ಕ್ರಬ್ಬಿಂಗ್:
ಒಣತ್ವಚೆಯಿಂದ ಮುಖ ಕಪ್ಪಾದರೆ ನೈಸರ್ಗಿಕ ವಸ್ತುಗಳನ್ನು ಸ್ಕ್ರಬ್ಬರ್ ಆಗಿ ಬಳಸಬಹುದು. ಓಟ್ ಮೀಲ್ಸ್ ಜೊತೆ ಮೊಸರು ಅಥವಾ ಹಾಲನ್ನು ಬೆರೆಸಿ ಅದರಿಂದ ಮುಖವನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿ ಒಣಗಲು ಬಿಡಬೇಕು. 20 ನಿಮಿಷದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಈ ರೀತಿ 2 ದಿನಕ್ಕೊಮ್ಮೆ ಮಾಡಬೇಕು.

2. ಮೊಸರು ಥೆರಪಿ:
ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಮೊಸರು ಪರಿಣಾಮಕಾರಿ. ತ್ವಚೆ ರಂಧ್ರಗಳು ಮೊಸರಿನ ಅಂಶವನ್ನು ಹೀರಿಕೊಂಡು ದಿನದಿಂದ ದಿನಕ್ಕೆ ಮೃದುವಾಗುತ್ತದೆ.ಮೊಸರಿನ ಜೊತೆ ಸ್ಟ್ರಾಬರಿ ಅಥವಾ ರೋಸ್ ದಳ ಸೇರಿಸಿದರೆ ಮುಖ ಮತ್ತಷ್ಟು ಹೊಳಪನ್ನು ಪಡುತ್ತದೆ.

3. ಲಿಪ್ ಬಾಮ್: ಬಾಯಿಯ ಸುತ್ತ ತ್ಚಚೆ ಒಣಗಿದ್ದರೆ ಲಿಪ್ ಬಾಮ್ ಕೂಡ ಬಳಸಬಹುದು. ಇಲ್ಲದಿದ್ದರೆ ಮಾಯಿಶ್ಚರೈಸರ್ ಗೆ ಸ್ವಲ್ಪ ನೀರು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಒಣ ತ್ವಚೆ ಮಾಯವಾಗುವುದು.

4. ಎಣ್ಣೆ ಮತ್ತು ಐಸ್ ಕ್ಯೂಬ್: ವಿಟಮಿನ್ ಇ ಅಥವಾ ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದು. ಈ ರೀತಿ ಪ್ರತಿದಿನ ಹಚ್ಚುವುದರಿಂದ ಮುಖ ಯೌವನದಿಂದ ಕೂಡಿರುತ್ತದೆ.

5. ಸನ್ ಸ್ಕ್ರೀನ್: ತ್ವಚೆ ಒಣಗಿ ಬಿರುಕು ಕಾಣಿಸಿಕೊಂಡರೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಇದು ಸೂರ್ಯ ಕಿರಣಗಳು ತ್ವಚೆಗೆ ಮತ್ತಷ್ಟು ಹಾನಿ ಉಂಟು ಮಾಡುವುದನ್ನು ತಡೆಯುತ್ತದೆ.
Also read
»  ಅಡುಗೆ ಸೋಡಾ ನೀಡುತ್ತೆ ಅಂದದ ತ್ವಚೆ
» ತುಟಿ ಒಣಗಿದರೆ ತಡಮಾಡದೆ ಹೀಗೆ ಮಾಡಿ
» ಆಲ್ಕೊಹಾಲ್ ಕುಡಿಯೋಕಲ್ಲ, ನಿಮ್ಮ ಸೌಂದರ್ಯಕ್ಕೆ ಬಳಸಿ
» ಉತ್ತಮ ಆರೋಗ್ಯಕ್ಕೆ ಈ ಟೀ ಕುಡಿಯಿರಿ