ಮೈಮೇಲೆ ಇರುವ ಬೇಡದ ಕೂದಲನ್ನು ತೆಗೆಯಲು ಬಳಸುವ ಉಪಾಯ ಅಂದರೆ ವ್ಯಾಕ್ಸಿಂಗ್. ಆದರೆ ಈ ರೀತಿಯ ವ್ಯಾಕ್ಸಿಂಗ್ ಕೆಲವೊಮ್ಮೆ ತ್ವಚೆಯಲ್ಲಿ ತುರಿಕೆ, ಉರಿ ಮುಂತಾದ ಸಮಸ್ಯೆಗಳನ್ನು ತರಬಹುದು.
ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ವ್ಯಾಕ್ಸಿಂಗ್ ಮಾಡಿದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮೃದುವಾದ ಮತ್ತು ಸುಂದರವಾದ ತ್ವಚೆ ನಿಮ್ಮದಾಗುವುದು.
1. ವ್ಯಾಕ್ಸ್ ಮಾಡುವ ಮೊದಲು ತ್ವಚೆಗೆ ಹೊಂದುತ್ತದೆಯೆ ಎಂದು ಪರೀಕ್ಷಿಸಲು ತ್ವಚೆಯ ಸ್ವಲ್ಪ ಭಾಗದಲ್ಲಿ ಮಾಡಿ ನೋಡಿ. ಹೀಗೆ ಮಾಡಿದಾಗ ಆ ಭಾಗದಲ್ಲಿ ತುರಿಕೆ ಅಥವಾ ತುರಿಕೆ ಕಾಣಿಸಿದರೆ ವ್ಯಾಕ್ಸ್ ಮಾಡಬಾರದು.
2. ವ್ಯಾಕ್ಸ್ ಮಾಡುವ ಮೊದಲು ಕಯ ಮತ್ತು ಕಾಲುಗಳನ್ನು ಚೆನ್ನಾಗಿ ತೊಳೆದು ಒಣಗಿದ ಮೇಲೆ ವ್ಯಾಕ್ಸ್ ಮಾಡಬೇಕು.
3. ಮುಖಕ್ಕೆ ವ್ಯಾಕ್ಸ್ ಮಾಡುವವರು ಗಮನಿಸಬೇಕಾದ ಅಂಶವೆಂದರೆ ವ್ಯಾಕ್ಸ್ ಮಿಶ್ರಣದ ಉಷ್ಣತೆ ಕೈಕಾಲುಗಳಿಗೆ ವ್ಯಾಕ್ಸ್ ಮಾಡಲು ಉಪಯೋಗಿಸುವ ಉಷ್ಣತೆಕ್ಕಿಂತ ಕಡಿಮೆ ಇರಬೇಕು.
4. ವ್ಯಾಕ್ಸ್ ಮಾಡುವಾಗ ನಿಮ್ಮ ತ್ವಚೆಗೆ ತುಂಬಾ ನೋವಾಗುತ್ತಿದ್ದರೆ, ನೋವು ನಿವಾರಕ ಜೆಲ್ ಅಥವಾ ಕ್ರೀಮ್ ಅನ್ನು ವ್ಯಾಕ್ಸ್ ಮಾಡುವ 30 ನಿಮಿಷ ಮೊದಲು ಹಚ್ಚಬೇಕು.
5. ಮೈಯನ್ನು ಒದ್ದೆ ಮಾಡಿಕೊಂಡು ವ್ಯಾಕ್ಸ್ ಮಾಡಬಾರದು. ವ್ಯಾಕ್ಸ್ ಮಾಡುವ ಮೊದಲು ಕೈಕಾಲುಗಳು ಒಣಗಿರಬೇಕು.
6. ಮೊಡವೆಗಳಿದ್ದರೆ ವ್ಯಾಕ್ಸ್ ಮಾಡಬಾರದು.
7. ವ್ಯಾಕ್ಸ್ ಮಾಡಿದ ಕೂಡಲೇ ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು.
8. ವ್ಯಾಕ್ಸ್ ಮಾಡಿದ ನಂತರ ಒದ್ದೆ ಟವಲ್ ನಿಂದ ಕೈ ಕಾಲುಗಳನ್ನು ಉಜ್ಜಿದರೆ ಸಂಪೂರ್ಣ ವ್ಯಾಕ್ಸ್ ಹೋಗುವುದು.
9. ವ್ಯಾಕ್ಸ್ ಮಾಡಿದ ಮೇಲೆ ಮಾಯಿಶ್ಚರೈಸರ್ ಹಚ್ಚಲು ಮರೆಯಬಾರದು. ಲೋಳೆಸರ ಹಚ್ಚಿದರೆ ತುಂಬಾ ಒಳ್ಳೆಯದು.
10. ವ್ಯಾಕ್ಸ್ ಮಾಡಿದ ನಂತರ 2 ದಿನಗಳವರೆಗೆ ಬಿಸಿಲಿಗೆ ಹೋದರೆ ಕೈಕಾಲುಗಳು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಂತರ ಹೋಗುವುದಾದರೂ ಸನ್ ಸ್ಕ್ರೀನ್ ಲೋಷನ್ ಬಳಸಿ.
» ಮುದ್ದು ಮುಖದ ಜಿಡ್ಡಿಗೆ ಸೆಡ್ಡು ಹೊಡೆಯೋ ತಂತ್ರ
» ಫೇಶಿಯಲ್ ಮಾಡುವ ಮುನ್ನ ಈ ಅಂಶ ಗಮನಿಸಿ!
» ತ್ವಚೆಯ ಬಗೆ ತಿಳಿದರೇನೆ ತ್ವಚೆ ಆರೈಕೆ ಸಾಧ್ಯ

Also read
» ಕೋಮಲ ತ್ವಚೆಗಾಗಿ ಈ ಫೇಶಿಯಲ್ ರೆಸಿಪಿ» ಮುದ್ದು ಮುಖದ ಜಿಡ್ಡಿಗೆ ಸೆಡ್ಡು ಹೊಡೆಯೋ ತಂತ್ರ