ಉತ್ತಮ ಆರೋಗ್ಯಕ್ಕೆ ಈ ಟೀ ಕುಡಿಯಿರಿ
Monday, September 12, 2011, 16:58 [IST]
Tea after workout
ಕೆಲಸದ ಒತ್ತಡದಿಂದ ದಣಿವಾಗಿದ್ದರೆ ಅಥವಾ ಕೆಲಸ ಪ್ರಾರಂಭಿಸಲು ಮೂಡ್ ಇಲ್ಲದಿದ್ದರೆ ಟೀ ಕುಡಿಯುವುದು ಅಭ್ಯಾಸ. ಆದರೆ ವ್ಯಾಯಾಮ ಮಾಡುವ ಮುನ್ನ ಮತ್ತು ನಂತರವೂ ಟೀ ಕುಡಿಯಬಹುದು.

ಆರೋಗ್ಯಕ್ಕೆ ಪೂರಕವಾಗಿರುವ ಮತ್ತು ತೂಕ ಇಳಿಸಲು ಸಹಾಯವಾಗುವ ಟೀ ಫ್ಲೇವರ್ ಗಳನ್ನು ಇಲ್ಲಿ ತಿಳಿಯೋಣ;

1. ಗ್ರೀನ್ ಟೀ:
ಈ ಹರ್ಬಲ್ ಟೀ ತೂಕ ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ. ವ್ಯಾಯಾಮದ ಮುನ್ನ ಮತ್ತು ನಂತರ ಗ್ರೀನ್ ಟೀ ಸೇವನೆಯಿಂದ ಶಕ್ತಿ ಬರುತ್ತದೆ. ಗ್ರೀನ್ ಟೀ ಯಲ್ಲಿರುವ ಕಫೆನ್ ಅಂಶ ಹಸಿವನ್ನು ನಿಯಂತ್ರಿಸಿ ಕ್ಯಾಲೊರಿ ಕರಗಿಸುತ್ತದೆ ಮತ್ತು ದೇಹದಲ್ಲಿನ ಅನವಶ್ಯಕ ನೀರಿನಂಶವನ್ನು ಹೊರಗೆಹಾಕುತ್ತದೆ.

2. ಬ್ಲಾಕ್ ಟೀ: ಬ್ಲಾಕ್ ಟೀ ಸೇವನೆಯಿಂದ ಚೈತನ್ಯವನ್ನು ಮರಳಿ ಬರುತ್ತದೆ. ಅಷ್ಟೇ ಅಲ್ಲ ದಿನವಿಡೀ ದೇಹ ಮತ್ತು ಮನಸ್ಸು ಚೈತನ್ಯದಿಂದ ಕೆಲಸದಲ್ಲಿ ತೊಡಗುವಂತೆ ನೋಡಿಕೊಳ್ಳುತ್ತದೆ. ಈ ಟೀ ಸೇವನೆಯಿಂದ ರಕ್ತಕಣಗಳಿಗೆ ನೈಟ್ರಿಕ್ ಆಕ್ಸೈಡ್ ಶಕ್ತಿ ಉಂಟುಮಾಡುವುದರೊಂದಿಗೆ ತೂಕವನ್ನೂ ನಿಯಂತ್ರಣಕ್ಕೆ ತರುತ್ತದೆ.

3. ಶುಂಠಿ ಟೀ: ಈ ನೈಸರ್ಗಿಕ ಶುಂಠಿ ಟೀ ಔಷಧಿಯಿದ್ದಂತೆ. ಮೂಳೆಗಳ ನೋವನ್ನೂ ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಶುಂಠಿ ಜೀರ್ಣಶಕ್ತಿಯನ್ನು ವೃದ್ಧಿಸುವುದರೊಂದಿಗೆ ಮೂಳೆಸವೆತವನ್ನೂ ತಡೆಗಟ್ಟುತ್ತದೆ.

4. ಹರ್ಬಲ್ ಟೀ: ಸಕ್ಕರೆಯಿಲ್ಲದ ತಣ್ಣನೆಯ ಟೀಯಲ್ಲಿ ಕ್ಯಾಲೊರಿನಲ್ಲಿ ಕಡಿಮೆಯಿದ್ದು, ನೀವು ಹೃದಯದ ಸ್ವಾಸ್ಥ್ಯಕ್ಕಾಗಿ ವ್ಯಾಯಾಮ ಕೈಗೊಂಡಿದ್ದರೆ ಈ ಹರ್ಬಲ್ ಟೀ ತುಂಬಾ ಸಹಕಾರಿಯಾಗುತ್ತದೆ.
Also read
» ಬರಿಗಾಲಿನ ನಡಿಗೆಯಲ್ಲಿದೆ ಬಹುಪಯೋಗ
» ಮಧ್ಯರಾತ್ರಿ ಜಿಮ್ ಮಾಸ್ಟರನ್ನ ಕರೆಸಿಕೊಂಡ ಕತ್ರಿನಾ
» ಸಹಜ ಲಯ, ತಾಳದಲ್ಲಿ ಪ್ರಿಯಾಂಕ ಫಿಗರ್
» ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ಜೀವನ