ಆಧುನಿಕ ಜೀವನ ಶೈಲಿ ನಮ್ಮ ದೇಹ ತೂಕವನ್ನು ಹೆಚ್ಚು ಮಾಡುತ್ತಿದೆ. ಬೆಳಗ್ಗೆ ಆಫೀಸ್ ಗೆ ಹೋದರೆ ಹೆಚ್ಚಿನವರಿಗೆ ಒಂದೇ ಕಡೆ ಕುಳಿತು ಮಾಡುವ ಕೆಲಸ, ಮನೆ ಕೆಲಸಕ್ಕೆ ಇರುವ ಆಧುನಿಕ ಉಪಕರಣಗಳು ಇವೆಲ್ಲವೂ ದೈಹಿಕ ಶ್ರಮ ಕಡಿಮೆ ಮಾಡುತ್ತದೆ. ಆದ್ದರಿಂದ ವ್ಯಾಯಾಮ ಮತ್ತು ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಆಹಾರಕ್ರಮದಲ್ಲಿ ಈ ಕೆಳಗಿನ ಆಹಾರಗಳನ್ನು ಸೇರಿಸಿದರೆ ದೇಹದ ಬೊಜ್ಜನ್ನು ಕರಗಿಸಬಹುದು.
1. ಕಪ್ಪು ಬೀನ್ಸ್: ಕಪ್ಪು ಬೀನ್ಸ್ ನಲ್ಲಿ 15 ಗ್ರಾಂ ಪ್ರೊಟೀನ್ ಇದ್ದು , ಕೊಬ್ಬಿನಂಶವಿರುವುದಿಲ್ಲ. ಆದ್ದರಿಂದ ಇದರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
2. ಓಟ್ಸ್: ಬೆಳಗ್ಗಿನ ತಿಂಡಿಗೆ ಓಟ್ಸ್ ಸೇವಿಸಿದರೆ ಹೊಟ್ಟೆ ತುಂಬುವುದರ ಜೊತೆಗೆ ದೇಹದ ತೂಕವನ್ನು ಸಮಪ್ರಮಾಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ.
3. ಬೆಣ್ಣೆ ಹಣ್ಣು: ಡಯಟ್ ನಲ್ಲಿರುವವರು ಕೊಬ್ಬಿನಂಶವಿರುವ ಆಹಾರವನ್ನು ಸೇವಿಸುವುದಿಲ್ಲ. ಆದರೆ ಕೆಲವು ಕೊಬ್ಬು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಮತ್ತು ಅವಶ್ಯಕ. ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಸೇವಿಸಿದರೆ ಹೊಟ್ಟೆ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ದಿನಾಲೂ ಸೇವಿಸುವುದರಿಂದ ಬೊಜ್ಜು ಹೊಟ್ಟೆಯನ್ನು ಕರಗಿಸುತ್ತದೆ. ಇದರಲ್ಲಿ ನಾರಿನಂಶ ಮತ್ತು ಪ್ರೊಟೀನ್ ಅಧಿಕವಾಗಿದೆ.
3.ಸಾಲಾಮೋನ್ ಮೀನು: ಸಾಲಾಮೋನ್ ನಲ್ಲಿ ಪ್ರೊಟೀನ್ ಅಂಶವಿದ್ದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಇದರಲ್ಲಿ ದೇಹದಕ್ಕೆ ಅವಶ್ಯಕವಾದ ಒಮೆಗಾ 3 ಕೊಬ್ಬಿನಂಶವಿದೆ.
4. ಹಣ್ಣುಗಳು: ಹಣ್ಣುಗಳಾದ ದ್ರಾಕ್ಷಿ, ಸ್ಟ್ರಾಬರಿ ನಲ್ಲಿ ವಿಟಮಿನ್ ಸಿ,antioxidant, ಮ್ಯಾಗ್ನಿಷಿಯಂ ಮತ್ತು ನಾರಿನಂಶ ಅಧಿಕವಿದ್ದು ದೇಹದ ತೂಕವನ್ನು ಸಮಪ್ರಮಾಣದಲ್ಲಿಡಲು ಸಹಾಯಮಾಡುತ್ತದೆ.
5. ಬ್ರೊಕೋಲಿ: ಬ್ರೊಕೋಲಿ ಸೇವಿಸುವುದರಿಂದ ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದಷ್ಟೆ ಅಲ್ಲ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಬ್ರೊಕೋಲಿ ಸಲಾಡ್ ಮಾಡಿ ಸೇವಿಸಿದರೆ ಬಾಯಿಗೆ ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು.
6. ಕೆಂಪಕ್ಕಿ: ಬಿಳಿ ಅನ್ನವನ್ನು ಸೇವಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ಕೆಂಪಕ್ಕಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ದೇಹದ ತೂಕ ನಿಯಂತ್ರಣದಲ್ಲಿಟ್ಟು ಆರೋಗ್ಯವನ್ನು ಹೆಚ್ಚಿಸುತ್ತದೆ. ಕೆಂಪಕ್ಕಿ ಅನ್ನದ ಜೊತೆ ಸಾಲಾಮೋನ್ ಸಾರು ಮಾಡಿ ಸೇವಿಸಿದರೆ ಬೇಗನೆ ದೇಹದ ತೂಕ ಕಡಿಮೆಯಾಗುತ್ತದೆ.
» ಆರೋಗ್ಯಕರ ಸಲಾಡ್ ಡಯಟ್ ಹೇಗಿರಬೇಕು?
» ಹೋ.. ಖಾರದಿಂದ ವಾವ್! ಅನ್ನುವಂತಹ ಮೈಕಟ್ಟು
» ತೂಕ ಇಳಿಸಲು ನಿಂಬೆ ಹಣ್ಣಿಗೆ ನಿಂಬೆ ಹಣ್ಣೆ ಸಾಟಿ

Also read
» ಡಯಟ್ ನಿಂದ ಬೊಜ್ಜು ಕರಗದಿರಲು ಕಾರಣವೇನು?» ಆರೋಗ್ಯಕರ ಸಲಾಡ್ ಡಯಟ್ ಹೇಗಿರಬೇಕು?