40 ದಾಟಿದ ಪುರುಷರ ಆರೋಗ್ಯ ಜೋಪಾನ!
Monday, December 26, 2011, 11:11 [IST]
Men Health After 40
ವಯಸ್ಸು 40 ದಾಟುತ್ತಿದ್ದ ಹಾಗೆ ಆರೋಗ್ಯದಲ್ಲಿ ಏರುಪೇರು ಸಹಜ. ಅದರಲ್ಲೂ ಪುರುಷರು ಮಹಿಳೆಯರಿಗಿಂತ 6 ವರ್ಷ ಮೊದಲು ಸಾಯುತ್ತಾರೆ ಎನ್ನುತ್ತದೆ ಇತ್ತೀಚಿನ ಸಮೀಕ್ಷೆ .

ಪುರುಷರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದೆ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. 40ರ ನಂತರ ಜವಾಬ್ದಾರಿ, ಒತ್ತಡ ಮತ್ತಷ್ಟು ಹೆಚ್ಚಾಗುವ ಕಾರಣ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇದೇ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ.

ಹಾಗೆಂದು ಇದರತ್ತ ನಿರ್ಲಕ್ಷ್ಯ ತೋರಿದರೆ ಮತ್ತಷ್ಟು ಗಂಭೀರ ಸ್ಥಿತಿ ಎದುರಿಸ ಬೇಕಾಗುತ್ತದೆ. ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿ 40 ನಂತರವೂ ಆರೋಗ್ಯದಿಂದ ಬಾಳಿ..

1. ಮೂತ್ರಕೋಶದ ತೊಂದರೆ: 40ರ ನಂತರ ಪುರುಷರಲ್ಲಿ ಮೂತ್ರಕೋಶದ ತೊಂದರೆಗಳು ಹೆಚ್ಚಾಗುತ್ತವೆ. ಈ ರೀತಿ ಮೂತ್ರಕೋಶದ ತೊಂದರೆಯ ಪ್ರಮುಖ ಲಕ್ಷಣ ರಾತ್ರಿಯಲ್ಲಿ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗುವುದು, ಈ ಕಾಯಿಲೆಯನ್ನು ಮೊದಲನೆ ಹಂತದಲ್ಲಿಯೆ ಗುರುತಿಸಿದರೆ ಸುಲಭವಾಗಿ ಗುಣಪಡಿಸಬಹುದು. ಈ ಕಾಯಿಲೆ ಕಾಣಿಸಿಕೊಂಡರೆ ಟೊಮೆಟೊ, ಖಾರ ಮತ್ತು ಸೋಯಾವನ್ನು ತಿನ್ನಬಾರದು.

2. ಆಹಾರಕ್ರಮ : ಅನ್ನ, ಸಕ್ಕರೆ ಅಂಶಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅಧಿಕ ಪ್ರೊಟೀನ್ ಮತ್ತು ನಾರಿನಂಶ, ದವಸ ಧಾನ್ಯಗಳನ್ನು ಅಧಿಕ ಸೇವಿಸಬೇಕು.

3. ಹೃದಯದ ಸ್ವಾಸ್ಥ್ಯ: ಹೃದಯ ಸಂಬಂಧಿ ಕಾಯಿಲೆ 40ರ ನಂತರ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತದೆ. ಅಧಿಕ ಕೊಬ್ಬಿನ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಒಮೆಗಾ3 ಕೊಬ್ಬಿನಂಶ ಮತ್ತು ಆಲೀವ್ ಎಣ್ಣೆಯನ್ನು ಹೆಚ್ಚಾಗಿ ಸೇವಿಸಬೇಕು.

4.ವ್ಯಾಯಾಮ: ದೇಹ ಆರೋಗ್ಯವಾಗಿರಲು ವ್ಯಾಯಾಮ ಅವಶ್ಯಕ. ದಿನದಲ್ಲಿ ಅರ್ಧ ಗಂಟೆ ವೇಗದ ನಡುಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಅಧಿಕ ಕೊಬ್ಬನ್ನು ಕರಗಿಸಿ ದೇಹವನ್ನು ಸಧೃಡವಾಗಿಡುತ್ತದೆ.

5. ಧೂಮಪಾನ ಮತ್ತು ಮದ್ಯಪಾನ: ಧೂಮಪಾನ ಮತ್ತು ಮದ್ಯಪಾನ ಅಭ್ಯಾಸ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ವಯಸ್ಸು ಹೆಚ್ಚಾದಂತೆ ಕಾಣುವಂತೆ ಮಾಡುತ್ತದೆ.

6. ಒತ್ತಡ ನಿಯಂತ್ರಣ: ಕೆಲಸದ ಒತ್ತಡ, ಮನೆ ಒತ್ತಡ ಇವೆಲ್ಲವೂ ದೇಹದ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ. ಆದ್ದರಿಂದ ಒತ್ತಡವನ್ನು ನಿಯಂತ್ರಣದಲ್ಲಿಡಲು ಯೋಗ, ವ್ಯಾಯಾಮ, ಪ್ರಾರ್ಥನೆ ಮುಂತಾದವುಗಳು ಸಹಾಯಕ್ಕೆ ಬರುವುದು.

Also read
» ಫ್ಯಾಷನ್ ಲೋಕದಲ್ಲಿ ಹರಿದ ಪ್ಯಾಂಟ್ ನ ದರಬಾರು
» ಸ್ನಾನ ಮಾಡಿದ ಮೇಲೆ ಬಾದಾಮಿ ಎಣ್ಣೆ ಹಚ್ಚಬಹುದು.
» ಪುರುಷರಿಗೆ ಸ್ಟೈಲಿಷ್ ಲುಕ್ ನೀಡುತ್ತೆ ಟಿ ಶರ್ಟ್
» 40ರ ನಂತರವೂ ಫಿಟ್ ಆಗಿರುವುದು ಹೇಗೆ?