ಬಟ್ಟೆಗಳನ್ನು ಧರಿಸುವಾಗ ಶುಭ್ರ ಮತ್ತು ಪರಿಮಳವಾಗಿಯಿದ್ದರೆ ಮನಸ್ಸಿಗೂ ಒಂಥರಾ ಉಲ್ಲಾಸ ಬರುತ್ತದೆ. ಈಗ ಚಳಿ ಕಮ್ಮಿಯಾಗುತ್ತ ಬಂದಿರುವುದರಿಂದ ಉಣ್ಣೆ ಬಟ್ಟೆಗಳನ್ನು ಒಗೆದು ತೆಗೆದಿಡಲು ಸರಿಯಾದ ಸಮಯವಾಗಿದೆ. ಈಗ ಒಗೆದು ಇಟ್ಟರೆ ಆದನ್ನು ಮತ್ತೆ ಉಪಯೋಗಿಸುವುದು ಇನ್ನು ಮಳೆಗಾಲದಲ್ಲಿಯೆ. ಆದ್ದರಿಂದ ಅಂತಹ ಬಟ್ಟೆಗಳನ್ನು ಶುಭ್ರ ಮತ್ತು ಪರಿಮಳಯುಕ್ತವಾಗಿ ಇಡುವ ವಿಧಾನ ನೋಡಿ ಇಲ್ಲಿದೆ.
1. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದು ಅದಕ್ಕೆ ಒಂದು ತುಂಡು ಚಕ್ಕೆ, ಏಲಕ್ಕಿ ಪುಡಿ 1/2 ಚಮಚ ಮತ್ತು ಬೆಳ್ಳುಳ್ಳಿ ಹಾಕಿ ಕುದಿಸಬೇಕು. ನಂತರ ಆ ನೀರನ್ನು ತಣ್ಣಗಾಗಲು ಬಿಡಬೇಕು. ಗಾಢಬಣ್ಣದ ಬಟ್ಟೆಗಳನ್ನು ಒಗೆದ ನಂತರ ಈ ನೀರಿನಲ್ಲಿ ಮುಳುಗಿಸಿ ಒಣ ಹಾಕಿದರೆ ಬಟ್ಟೆ ಪರಿಮಳಯುಕ್ತವಾಗಿರುತ್ತದೆ.
2. ಗುಲಾಬಿ ದಳಗಳು, ಪುದೀನಾ ಎಲೆ, ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಬಕೆಟ್ ನಲ್ಲಿ 1/2 ಬಕೆಟ್ ನೀರಿನಲ್ಲಿ ಮಿಶ್ರ ಮಾಡಬೇಕು. ಈಗ ಒಗೆದ ಬಟ್ಟೆಗಳನ್ನು ಈ ನೀರಿನಲ್ಲಿ ಮುಳುಗಿಸಿ ನಂತರ ಒಣಗಲು ಹಾಕಬೇಕು.
3. ನೀಲಗಿರಿ ಎಲೆ ಅಥವಾ ಸೀಬೆ ಕಾಯಿಯ ಎಲೆಯನ್ನು ಸ್ವಲ್ಪ ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಹಾಸಿಗೆ ಹೊದಿಕೆಗಳನ್ನು(ಬೆಡ್ ಶೀಟ್) ಮುಳುಗಿಸಿ ನಂತರ ಒಣಗಿಸಿದರೆ ಹೊದಿಕೆ ಪರಿಮಳವನ್ನು ಹೊಂದುವುದು.
ಈ ಸಲಹೆಗಳನ್ನು ದಿನ ಬಳಕೆಯ ಬಟ್ಟೆಗಳಲ್ಲಿ ಉಪಯೋಗಿಸಬಹುದು:
* ಬಟ್ಟೆಗಳನ್ನು ಒಗೆದು ಮಡಚಿ ಇಡುವಾಗ ಪೇಪರ್ ಬಳಸಿ ಮಡಚಿಟ್ಟರೆ ಒಳ್ಳೆಯದು.
* ಸುವಾಸನೆ ಇರುವ ಹೂಗಳನ್ನು ಒಣಗಿಸಿ, ತುಳಸಿಯ ಬೀಜಗಳನ್ನು ಸ್ವಲ್ಪ ತೆಗದು ಇವುಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆ ಕಬೋರ್ಡ್ ನಲ್ಲಿಟ್ಟರೆ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.
* ಸುಗಂಧಭರಿತ ಎಣ್ಣೆಯಲ್ಲಿ ಸ್ವಲ್ಪ ಹತ್ತಿಯನ್ನು ಅದ್ದಿ ಅದನ್ನು ಒಂದು ಚಿಕ್ಕ ಕವರ್ ನಲ್ಲಿ ಹಾಕಿ ಬಟ್ಟೆ ಹಾಕುವ ಕಬೋರ್ಡ್ ನಲ್ಲಿ ನೇತು ಹಾಕಿದರೆ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.
» ಬಣ್ಣದ ಮಾಸದ ಹಾಗೆ ಕಪ್ಪು ಬಟ್ಟೆಯ ನಿರ್ವಹಣೆ
» ಬಟ್ಟೆ ಬಣ್ಣ ಮಾಸದಂತೆ ತಡೆಯುವುದು ಹೇಗೆ?
» ಟವಲ್ ಗೂ ಕೂಡ ಸ್ಪೆಷಲ್ ಕೇರ್ ಬೇಕು

Also read
» ಬೆಲ್ಟ್ ನೀರಿನಲ್ಲಿ ತೊಳೆಯಬಾರದು!» ಬಣ್ಣದ ಮಾಸದ ಹಾಗೆ ಕಪ್ಪು ಬಟ್ಟೆಯ ನಿರ್ವಹಣೆ
» ಬಟ್ಟೆ ಬಣ್ಣ ಮಾಸದಂತೆ ತಡೆಯುವುದು ಹೇಗೆ?
» ಟವಲ್ ಗೂ ಕೂಡ ಸ್ಪೆಷಲ್ ಕೇರ್ ಬೇಕು