ವಾಚ್ ದೀರ್ಘ ಕಾಲ ಬಾಳಿಕೆ ಬರಲು ಕೆಲ ಸಲಹೆಗಳು
Wednesday, February 22, 2012, 17:36 [IST]
Best Way To Maintain Watch
ಟೈಮ್ ನೋಡಲಷ್ಟೆ ಅಲ್ಲ ಸ್ಟೈಲಿಷ್ ಆಗಿ ಕಾಣಬೇಕೆಂದು ತುಂಬಾ ಸ್ಟೈಲಿಷ್ ಆದ ವಾಚ್ ಗಳನ್ನು ಕಟ್ಟುತ್ತವೆ. ಈ ವಾಚ್ ನಲ್ಲಿ ಅನೇಕ ಪ್ರತಿಷ್ಠಿತ ಬ್ರಾಂಡ್ ನ ವಾಚ್ ಗಳಿವೆ. ವಾಚ್ ಗಳನ್ನು ಕೈಯಲ್ಲಿ ಕಟ್ಟಿಕೊಂಡೇ ಇರುವುದರಿಂದ ಕೊಳೆಯಾಗಬಹುದು. ನಿಮಗೆ ನಿಮ್ಮ ವಾಚ್ ಅನ್ನು ಶುದ್ಧಗೊಳಿಸಬೇಕೆಂದು ಬಯಸುವುದಾದರೆ ಈ ಕೆಳಗಿನ ಸಲಹೆಗಳು ನಿಮಗೆ ನೆರವಾಗಬಹುದು.

1. ವಾಚ್ ತಂದ ಬಾಕ್ಸ್ ಗಳನ್ನು ಬಿಸಾಡಬೇಡಿ. ಉಪಯೋಗಿಸಿದ ನಂತರ ವಾಚ್ ಅನ್ನು ಅದರಲ್ಲಿ ಹಾಕಿಡಿ.

2.
ವಾಚ್ ಮತ್ತು ಬ್ರಾಸ್ ಲೆಟ್ ಅನ್ನು ಒಂದೇ ಕೈಯಲ್ಲಿ ಕಟ್ಟಬೇಡಿ. ಏಕೆಂದರೆ ಬ್ರಾಸ್ ಲೆಟ್ ವಾಚ್ ನ ಗ್ಲಾಸ್ ಮೇಲೆ ತಾಗಿ ಗೀರು ಬೀಳಬಹುದು.

3. ವಿನಿಗರ್ ಅಥವಾ ಪರ್ ಫ್ಯೂಮ್ ಅನ್ನು ವಾಚ್ ಶುಚಿಗೊಳಿಸಲು ಬಳಸಬೇಡಿ.

4. ಟೂತ್ ಪೇಸ್ಟ್ ಅನ್ನು ಬ್ರೆಷ್ ಗೆ ಹಾಕಿ ವಾಚ್ ಅನ್ನು ಶುಚಿಗೊಳಿಸಬೇಕು. ಪ್ರತಿನಿತ್ಯ ಶುಚಿಗೊಳಿಸಲು ಒಣಗಿದ ಮಸ್ಲೀನ್ ಬಟ್ಟೆ ಒಳ್ಳೆಯದು.

5. ವಾಚ್ ಅನ್ನು ಕೊಳ್ಳುವಾಗ ನೀರು ತಾಗಿದಾಗ ಹಾಳಾಗದಂತಹ ವಾಚ್ ಕೊಂಡರೆ ದೀರ್ಘಕಾಲ ಬಾಳಿಕೆ ಬರುತ್ತದೆ.
Also read
» ಮನೆ ವಸ್ತುಗಳ ಶುಚಿತ್ವದಲ್ಲಿ ಟೂತ್ ಪೇಸ್ಟ್ ಬಳಕೆ!
» ಅಕ್ವೇರಿಯಂ ಕ್ಲೀನ್ ಮಾಡೋದು ಕಷ್ಟವೇನಲ್ಲ
» ಅಡುಗೆ ಸೋಡಾದಿಂದ ಮನೆ ಶುಚಿ ಹೇಗೆ?
» ಮ್ಯಾಟ್ ನಲ್ಲಿ ಅಡಗಿದೆ ಮನೆಯ ಶುಚಿತ್ವ