ಹಾಲು ಕಂದನ ಅಲುಗಾಡಿಸಿದರೆ ಪ್ರಾಣಕ್ಕೆ ಅಪಾಯ!
Monday, February 20, 2012, 17:53 [IST]
How To Care New Born Baby
ಹೆರಿಗೆಯಾದ ನಂತರ ತಾಯಿ ಮತ್ತು ಮಗುವಿಗೆ ಹೆಚ್ಚಿನ ಆರೈಕೆ ಮಾಡಬೇಕು. ಈ ಸಮಯದಲ್ಲಿ ಮನೆಯವರ ಸಹಾಯ ಹೆಚ್ಚಾಗಿ ಬೇಕಾಗುತ್ತದೆ. ಅದರಲ್ಲಿ ಹೊಸ ಅತಿಥಿಯನ್ನು ನೋಡಲು ಮನೆಯವರು ಮತ್ತು ಸ್ನೇಹಿತರು ಬರುತ್ತಾರೆ. ಬಂದವರು ಮಗುವನ್ನು ಎತ್ತಿ ಮುದ್ದಾಡುತ್ತಾರೆ. ಆದರೆ ಮಗುವಿನ ತ್ವಚೆ ತುಂಬಾ ಸೂಕ್ಷ್ಮವಾಗಿದ್ದು ಮಗುವನ್ನು ಅವರ ಕೈಗೆ ಕೊಡುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಿ.

1. ಕೈಗಳನ್ನು ತೊಳೆಯಬೇಕು: ಮಗುವನ್ನು ಮುಟ್ಟುವ ಮೊದಲು ಕೈಗಳು ಶುಭ್ರವಾಗಿದೆಯೆ ನೋಡಿ. ಒಂದು ವೇಳೆ ಇಲ್ಲ ಅಂದರೆ ಕೈ ತೊಳೆದು ಎತ್ತುವಂತೆ ಮೃದುವಾಗಿ ಅವರಿಗೆ ತಿಳಿಸಿ.

2. ಮಗುವಿನ ತಲೆ ಮತ್ತು ಕುತ್ತಿಗೆ ಭಾಗ ಸರಿಯಾಗಿ ಹಿಡಿಯಬೇಕು:
ಎಷ್ಟೊ ಜನರಿಗೆ ಚಿಕ್ಕ ಮಗುವನ್ನು ಎತ್ತಿ ಅಭ್ಯಾಸವಿರುವುದಿಲ್ಲ. ಅಂತಹವರು ಮಗುವನ್ನು ಎತ್ತಿಕೊಳ್ಳುವಾಗ ಅವರ ಕೈಯಿಂದ ಮಗುವಿನ ತಲೆಗೆ ಸಪೋರ್ಟ್ ಕೊಡಲು ಹೇಳಿ.

3. ಮಗುವನ್ನು ಅಲ್ಲಾಡಿಸಬಾರದು:
ಚಿಕ್ಕ ಮಗುವನ್ನು ಅಲುಗಾಡಿಸಬಾರದು. ಹೀಗೆ ಮಾಡಿದರೆ ರಕ್ತ ಮೆದುಳಿಗೆ ಹರಿದು ಮಗು ಸಾವನ್ನಪ್ಪಬಹುದು. ಆದ್ದರಿಂದ ಮಗುವನ್ನು ಎಚ್ಚರಗೊಳಿಸಬೇಕೆಂದರೆ ಮಗುವಿನ ಪಾದಕ್ಕೆ ಮೆಲ್ಲನೆ ಕಚಗುಳಿ ಮಾಡಿ.

4. ಮಗುವಿಗೆ ಚೆನ್ನಾಗಿ ಹೊದಿಕೆ ಹಾಕಿ ಮಲಗಿಸಿ.

5. ಮಲಗಿಸುವಾಗ ಮೇಲ್ಮುಖವಾಗಿ ಮಲಗಿಸಬೇಕು. ಮೃದುವಾದ ಬಟ್ಟೆಯನ್ನು ವೃತ್ತಾಕಾರವಾಗಿ ಸುತ್ತಿ ಅದರ ಮೇಲೆ ಮಗುವಿನ ತಲೆ ಇಡಿ. ಈ ರೀತಿ ಮಾಡಿದರೆ ಮಗುವಿನ ಕುತ್ತಿಗೆ ಸರಿಯಾಗಿ ಇರುತ್ತದೆ. ಕುತ್ತಿಗೆ ವಾರೆ ಇರುವಂತೆ ಮಲಗಿಸಿದರೆ ಕುತ್ತಿಗೆಗೆ ನೋವು ಬರುವುದು ಅಲ್ಲದೆ ಕುತ್ತಿಗೆ ಓರೆಯಾಗುತ್ತದೆ.

6.
ತಲೆಯನ್ನು ಸರಿಯಾಗಿ ಇಡದಿದ್ದರೆ ಮಗುವಿನ ತಲೆ ಆಕಾರ ಒಂದು ಕಡೆ ಸ್ವಲ್ಪ ಚಪ್ಪಟೆಯಾಗುತ್ತದೆ.

ಹೀಗೆ ಚಿಕ್ಕ ಮಗುವನ್ನು ಆರೈಕೆ ಮಾಡಿ.
Also read
» ಅಮ್ಮ ಮಾತ್ರೆ ತಿಂದರೆ ಕಂದನಿಗೆ ಅಪಾಯ
» ಹೊಟ್ಟೆಯಲ್ಲಿ ಮಗು ಒದ್ದರೆ ಏನು ಅರ್ಥ?
» ಗರ್ಭಿಣಿಯರಿಗೆ ಆರೋಗ್ಯಕರ ಸ್ನ್ಯಾಕ್ಸ್ ಇಲ್ಲಿದೆ
» ಅಮ್ಮ-ಮಗುವಿನ ಆರೋಗ್ಯಕ್ಕೆ ಅತಿ ಅವಶ್ಯಕ ಆಹಾರ