ಮಸಾಲೆ ತುಂಬಿದ ಮೊಟ್ಟೆ ತಿನ್ನಲು ಬಲುರುಚಿ
Tuesday, February 21, 2012, 12:56 [IST]
Stuffed Egg Recipe
ಪ್ರತಿನಿತ್ಯ ಒಂದು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಯಿಂದ ತಯಾರಿಸುವ ಪಪ್ಸ್, ಆಮ್ಲೇಟ್, ಕಟ್ಲೇಟ್ ರುಚಿ ಚಿರಪರಿಚಿತ. ಮೊಟ್ಟೆಯಿಂದ ಬೇರೆ-ಬೇರೆ ರೀತಿಯ ಖಾದ್ಯಗಳನ್ನು ಮಾಡಬಯಸುವವರಿಗೆ ಮಸಾಲೆ ಮೊಟ್ಟೆ (ಸ್ಟಫ್ಡ್ ಎಗ್) ಟ್ರೈ ಮಾಡಬಹುದು. ಮೊಟ್ಟೆಯಿಂದ ತಯಾರಿಸುವ ಈ ತಿಂಡಿ ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ ಮೊಟ್ಟೆ 4
* 1 ಚಮಚ ತುಪ್ಪ/ಎಣ್ಣೆ
* ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 1/2 (ಚಿಕ್ಕ ಈರುಳ್ಳಿ ಆಗಿದ್ದರೆ 1)
* ಹಸಿಮೆಣಸು 1 (ಕತ್ತರಿಸಿದ್ದು)
* 1/2 ಚಮಚದಷ್ಟು ಶುಂಠಿ (ಚಿಕ್ಕದಾಗಿ ಕತ್ತರಿಸಿರಬೇಕು)
* 1 ಚಮಚ ಟೊಮೆಟೊ ರಸ
* 1 ಚಮಚ ಜೋಳದ ಪುಡಿ
* 1 ಮೊಟ್ಟೆ ( ಕದಡಿದ)
* 1 ನಿಂಬೆ ಹಣ್ಣು
* 1 ಬ್ರೆಡ್ ತುಂಡಿನ ಚೂರುಗಳು
* ಎಣ್ಣೆ
* ಉಪ್ಪು ರುಚಿಗೆ ತಕ್ಕ
* ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಚಮಚ

ತಯಾರಿಸುವ ವಿಧಾನ:

1. ಬಾಣಲೆಗೆ ಎಣ್ಣೆ ಅಥವಾ ತುಪ್ಪವನ್ನು ಹಾಕಿ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

2. ಈಗ ಹಸಿಮೆಣಸು, ಉಪ್ಪು, ಕೊತ್ತಂಬರಿ, ಶುಂಠಿ, ಟೊಮೆಟೊ ರಸ ಮತ್ತು ನಿಂಬೆ ರಸ ಹಾಕಿ 3-4 ನಿಮಿಷ ಫ್ರೈ ಮಾಡಬೇಕು.

3. ಬೇಯಿಸಿದ ಮೊಟ್ಟೆಗಳನ್ನು 2 ಸಮಭಾಗವಾಗಿ ಕತ್ತರಿಸಬೇಕು.

4. ಅದರ ಹಳದಿಯನ್ನು ತೆಗೆದು, ಅದನ್ನು ಈ ಫ್ರೈ ಮಾಡುತ್ತಿರುವ ಮಿಶ್ರಣದ ಜೊತೆ ಸೇರಿಸಿ ಪುಡಿ ಪುಡಿ ಮಾಡಬೇಕು.

5. ಈಗ ಈ ಮಿಶ್ರಣವನ್ನು ಕತ್ತರಿಸದ ಮೊಟ್ಟೆ ತುಂಡುಗಳಲ್ಲಿ ತುಂಬಬೇಕು.

7. ಈಗ ಕದಡಿದ ಮೊಟ್ಟೆಗೆ ಸ್ವಲ್ಪ ಜೋಳದ ಪುಡಿ ಹಾಕಿ, ಚಿಟಿಕಿಯಷ್ಟು ಉಪ್ಪು ಹಾಕಿ ಚೆನ್ನಾಗಿ ತಿರುಗಿಸಬೇಕು.

8. ಬ್ರೆಡ್ ಚೂರುಗಳನ್ನು ಒಂದು ಪ್ಲೇಟ್ ನಲ್ಲಿ ಹಾಕಿಡಿ.

9. ಬಾಣಲೆಯಲ್ಲಿ ಎಣ್ಣೆ ಹಾಕಿ ಕುದಿಸಿ.

10. ಮಸಾಲೆ ತುಂಬಿದ ಮೊಟ್ಟೆ ತುಂಡುಗಳನ್ನು ಸೇರಿಸಿ, ಅದನ್ನು ಒಂದು ಮೊಟ್ಟೆಯಾಕಾರದಲ್ಲಿ ಹಿಡಿದು ಅದನ್ನು ಜೋಳದ ಪುಡಿ ಮತ್ತು ಮೊಟ್ಟೆ ಹಾಕಿರುವ ಮಿಶ್ರಣದಲ್ಲಿ ಮುಳುಗಿಸಬೇಕು.

11. ನಂತರ ಅದನ್ನು ಬ್ರೆಡ್ ಚೂರುಗಳ ಮೇಲೆ ಅದ್ದಬೇಕು.

12. ಈಗ ಮಸಾಲೆ ತುಂಬಿದ ಮೊಟ್ಟೆಯನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಬೇಕು.

13. ಹೀಗೆ ಮಾಡಿದರೆ ಮಸಾಲ ಎಗ್ ರೆಡಿ. ಇದನ್ನು ತಟ್ಟೆಯಲ್ಲಿ ಇಟ್ಟು ಸೌತೆಕಾಯಿ ಮತ್ತು ಈರುಳ್ಳಿ ಕತ್ತರಿಸಿ, ಒಂದು ತುಂಡು ನಿಂಬೆ ಹಣ್ಣು ಇಟ್ಟು ತಿನ್ನಲು ಕೊಡಿ.
Also read
» ವೀಕ್ ಎಂಡ್ ಸ್ಪೆಷಲ್ -ಎಗ್ ರೋಲ್
» ಎಗ್ ದುನಿಯಾ : ಮೊಟ್ಟೆಮನೆಗೆ ಸ್ವಾಗತ
» ಗೋಡಂಬಿ ಅಣಬೆ ಪಲ್ಯ ಮತ್ತು ಬಿಸಿಬಿಸಿ ಆಮ್ಲೆಟ್‌!
» ಎಗ್ ಬುರ್ಜಿ ಹೀಗೆ ಮಾಡೋದು ಹೇಗೆ ಗೊತ್ತಾ !